Advertisement

ದಿವ್ಯಾಂಗರಿರುವ ಕುಟುಂಬಕ್ಕೆ ಹೆಚ್ಚಿನ ತೆರಿಗೆ ವಿನಾಯಿತಿ?

11:24 AM Jan 14, 2018 | Team Udayavani |

ಹೊಸದಿಲ್ಲಿ: ದಿವ್ಯಾಂಗರನ್ನು ನೋಡಿಕೊಳ್ಳುತ್ತಿರುವ ಕುಟುಂಬಗಳಿಗೆ ಹೆಚ್ಚಿನ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಂದ್ರ ವಿತ್ತ ಸಚಿವಾಲಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಶಿಫಾರಸು ಮಾಡಿದೆ. ಹಿಂದೂ ಅವಿಭಕ್ತ ಕುಟುಂಬಗಳಿಗೆ ಮತ್ತು ವ್ಯಕ್ತಿಗಳಿಗೆ ಆದಾಯ ತೆರಿಗೆ ನಿಯಮ 80ಡಿ  ವಿನಾಯಿತಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಚಿವಾಲಯ ಮನವಿ ಮಾಡಿದೆ. 

Advertisement

ಸದ್ಯ ದಿವ್ಯಾಂಗ ವ್ಯಕ್ತಿಗೆ ವಾರ್ಷಿಕವಾಗಿ ವೆಚ್ಚವಾಗುವ ಒಟ್ಟು ಮೊತ್ತದ 75 ಸಾವಿರ ರೂ. ವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಶೇ.80ರಷ್ಟು ಕಡಿಮೆ ದಿವ್ಯಾಂಗ ಪ್ರಮಾಣ ಇರುವ ಮತ್ತು ಶೇ.40ಕ್ಕಿಂತ ಹೆಚ್ಚು ದಿವ್ಯಾಂಗ ಇರುವವರಿಗೆ ಇದು ಅನ್ವಯವಾಗುತ್ತದೆ. ಅದರ ಪ್ರಮಾಣ ಶೇ.80ರಷ್ಟಿದ್ದರೆ ವಿನಾಯಿತಿ ಮೊತ್ತ 1,25,000 ರೂ. ವರೆಗೆ ಸಿಗುತ್ತಿದೆ. ಲೋಕಸಭೆ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಈ ಆಶ್ವಾಸನೆಯನ್ನು ನೀಡಲಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಇದನ್ನು ಜಾರಿ ಮಾಡಬೇಕೆಂದು ವಿತ್ತ ಸಚಿವಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next