Advertisement

ಐತಿಹಾಸಿಕ ಪೊಸಡಿಗುಂಪೆ ಆಗುತ್ತಿದೆಯೇ ಪ್ಲಾಸ್ಟಿಕ್‌ ಕೊಂಪೆ ?

09:20 PM May 13, 2019 | Sriram |

ಬಾಯಾರು: ಇತಿಹಾಸ ಪ್ರಸಿದ್ಧವಾದ ಪೊಸಡಿ ಗುಂಪೆ ಕಾಸರಗೋಡು ಜಿಲ್ಲೆಯಲ್ಲಿ ಇರುವ ಪುರಾಣ ಐತಿಹ್ಯ ಇರುವ ಸ್ಥಳ. ಕೇರಳ ಸರಕಾರ ಇದನ್ನು ಪ್ರವಾಸಿ ಕೇಂದ್ರ ಎಂಬುದಾಗಿ ಗುರುತಿಸಿದ್ದರೂ ಕೇವಲ ಬೋರ್ಡ್‌ಗಳಲ್ಲಿ ಅದನ್ನು ನೋಡಬಹುದಷ್ಟೆ ಹೊರತು ಯಾವುದೇ ರೀತಿಯ ಸೌಲಭ್ಯಗಳು ಇಲ್ಲಿಲ್ಲ. ಪ್ರವಾಸಿಗರು ಅನ್ನುವ ಹೆಸರಿನಲ್ಲಿ ಜನರು ಇಲ್ಲಿಗೆ ಬಂದು ಸಾಕಷ್ಟು ರೀತಿಯ ತೊಂದರೆಗಳನ್ನು ಕೊಡುವ ಘಟನೆಗಳು ಇಲ್ಲಿ ಆಗಾಗ ನಡೆಯುವ ಮಾಹಿತಿ ಬರುತ್ತಿದೆ.

Advertisement

ಕೆಲವು ದಿನಗಳ ಹಿಂದೆ ಪ್ರವಾಸದ ಹೆಸರಲ್ಲಿ ಬಂದ ಕೆಲವರು ನೂರುಗಟ್ಟಲೆ ಪ್ಲಾಸ್ಟಿಕ್‌ ನೀರಿನ ಬಾಟಲ್‌, ತಟ್ಟೆಗಳು, ಮದ್ಯದ ಬಾಟಲುಗಳನ್ನು ಎಸೆದು ತಾವು ಅನಾಗರಿಕರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಿಂದು ಕುಡಿದು ಉಳಿದ ವಸ್ತುಗಳನ್ನು ಅಲ್ಲೇ ಎಸೆಯದೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕೆಂಬ ಕನಿಷ್ಠ ಜ್ಞಾನವೂ ಹೆಚ್ಚಿನವರಿಗೆ ಇಲ್ಲದಿರುವುದು ನಮ್ಮ ದುರಂತ.

ಪೊಸಡಿಗುಂಪೆ ಎತ್ತರದ ಗುಡ್ಡವಾಗಿದ್ದು, ಈ ಭಾಗದಲ್ಲಿ ಕೆಲವಷ್ಟೇ ಮನೆಗಳಿವೆ. ಇಲ್ಲಿಗೆ ಯಾರು ಬರುತ್ತಾರೆ ಎಂದು ತಿಳಿಯಲು ಈ ಭಾಗದ ಜನರಿಂದಲೇ ಸಾಧ್ಯವಿಲ್ಲ. ಸರಕಾರ ಕೇವಲ ಪ್ರವಾಸೀ ತಾಣ ಎಂಬ ಬೋರ್ಡ್‌ ಹಾಕಿ ತನ್ನ ಕೆಲಸ ಅಷ್ಟೇ ಎಂಬಂತೆ ಕುಳಿತಿದೆ. ಹೀಗಿರುವಾಗ ಇದೇ ರೀತಿ ಪ್ರವಾಸದ ಹೆಸರಿನಲ್ಲಿ ಜನರು ಬಂದು ಪೊಸಡಿಗುಂಪೆಯನ್ನು ಕಸದ ಕೊಂಪೆಯಾಗಿ ಮಾಡುವ ದಿನ ದೂರವಿಲ್ಲ. ಅದರ ಮೊದಲೇ ಸೂಕ್ತ ಕ್ರಮ ಕೈಗೊಳ್ಳಲು ಈ ಭಾಗದ ಜನರು ಸರಕಾರವನ್ನು ಆಗ್ರಹಿಸಬೇಕಾಗಿದೆ.

ಕಂಡಕಂಡಲ್ಲಿ ತಿಂದು ಕುಡಿದು ತ್ಯಾಜ್ಯ ಎಸೆಯುವಲ್ಲಿ ಪ್ರವಾಸಿಗರದೂ ದೊಡ್ಡ ಕಾಣಿಕೆಯಿದೆ.ಇಂಥವರನ್ನು ತಡೆಯುವ, ಎಚ್ಚರಿಸುವ ಅಗತ್ಯ ಸಾರ್ವಜನಿಕರದ್ದೂ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next