ಕೊಚ್ಚಿ: ದೇಶದಲ್ಲಿ ಈಗಲೂ ಗರಿಷ್ಠ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದು ಕೇರಳದಲ್ಲಿ. ಪರಿಸ್ಥಿತಿ ಇಂತಹ ಸ್ಥಿತಿಯಲ್ಲಿರುವಾಗ ಕೊವಿಶೀಲ್ಡ್ ಲಸಿಕೆ ಹಾಕುವುದರಲ್ಲೂ ಗೊಂದಲ ಉದ್ಭವಿಸಿದೆ.
ಕಿಟೆಕ್ಸ್ ಗಾರ್ಮೆಂಟ್ಸ್ ಎಲ್‌ಟಿಡಿ ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇರಳ ಉಚ್ಚ ನ್ಯಾಯಾಲಯದಲ್ಲಿ; ಕೊವಿಶೀಲ್ಡ್ ಮೊದಲ ಲಸಿಕೆ ನಂತರ 84 ದಿನಗಳ ಅಂತರ ನೀಡಲು ಕಾರಣವೇನು? ಸಾಮರ್ಥ್ಯವೇ? ಲಸಿಕೆಗಳ ಅಲಭ್ಯತೆಯೇ? ಈ ಬಗ್ಗೆ ವಿವರಣೆ ನೀಡಿ ಎಂದು ಕೇಳಿದೆ.
ಇದನ್ನೂ ಓದಿ:12ವರ್ಷಗಳಿಗೊಮ್ಮೆ ಅರಳುವ ಅಪರೂಪದ ನೀಲ ಕುರುಂಜಿ ಹೂವು
ಒಂದು ವೇಳೆ ಸಾಮರ್ಥ್ಯ ಕಾರಣವೆನ್ನುವುದಾದರೆ ಪೂರಕ ಮಾಹಿತಿ ಸಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಕೇವಲ ಅಲಭ್ಯತೆಯೇ ಕಾರಣವೆನ್ನುವುದಾದರೆ ಕಿಟೆಕ್ಸ್‌ನಂತಹ ಹಣವುಳ್ಳವರು ಸ್ವಂತ ವೆಚ್ಚದಲ್ಲಿ ಲಸಿಕೆ ಪಡೆದುಕೊಳ್ಳಲು ಅನುಮತಿ ನೀಡಿ ಎಂದು ಉಚ್ಚ ನ್ಯಾಯಾಲಯ ಹೇಳಿದೆ.