ಜೇವರ್ಗಿ: ಪಟ್ಟಣದ ವಿಜಯಪುರ ರಸ್ತೆಯ ಓಂನಗರ ಬಡಾವಣೆಯ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಬುಧವಾರ ಶ್ರೀ ಸ್ವಾಮಿ ಅಯ್ಯಪ್ಪ ಮಾಲಾಧಾರಿಗಳಿಂದ ಇರುಮುಡಿ ಪೂಜಾ ಮಹೋತ್ಸವ ಆಯೋಜಿಸಲಾಗಿತ್ತು.
ಅಯ್ಯಪ್ಪಸ್ವಾಮಿ ಪೂಜೆಗಾಗಿ ಸುಂದರ ಮಂಟಪ ನಿರ್ಮಿಸಲಾಗಿತ್ತು. ಮಂಟಪದ ಎಡ ಬದಿಯಲ್ಲಿ ಸಂಕಷ್ಟ ನಿವಾರಕ ಗಣೇಶ, ಸುಬ್ರಮಣ್ಯಸ್ವಾಮಿ, ಮಧ್ಯ ಭಾಗದಲ್ಲಿ ಶ್ರೀಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಇರುಮುಡಿ ಹೊತ್ತಾಗ 18 ಮೆಟ್ಟಿಲು ಏರಿಯೇ ಸಾಗಬೇಕು. ಹೀಗಾಗಿ ಅಯ್ಯಪ್ಪ ಸ್ವಾಮಿ ಮುಂಭಾಗದಲ್ಲಿ 18 ನಂದಾ ದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗಂಗನಾಳ ಶ್ರೀಗಳು ನೇತೃತ್ವ ವಹಿಸಿದ್ದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ವಿಶ್ವನಾಥ ಇಮ್ಮಣ್ಣಿ ಅವರಿಂದ ಅನ್ನಸಂತರ್ಪಣೆ ಜರುಗಿತು.
ಓಂ ನಗರ, ಬಸವೇಶ್ವರ ನಗರ, ದತ್ತನಗರ, ಶಿಕ್ಷಕರ ಕಾಲೋನಿ, ಶಾಂತನಗರ, ವಿದ್ಯಾನಗರ ಸೇರಿದಂತೆ ವಿವಿಧ ಬಡಾವಣೆಗಳಿಂದ ನೂರಾರು ಭಕ್ತರು ಆಗಮಿಸಿದ್ದರು. ಪುರಸಭೆ ಅದ್ಯಕ್ಷೆ ಕಸ್ತೂರಿಬಾಯಿ ಸಾಹೇಬಗೌಡ ಕಲ್ಲಾ, ಚಂದ್ರು ವಾಗೊ¾àರೆ, ಮಂಜುನಾಥ ದೊಡ್ಡಮನಿ, ಗಿರೀಶ ತುಂಬಗಿ, ರವಿಚಂದ್ರ ಗುತ್ತೇದಾರ, ಗಿರೀಶ ಪಡಶೆಟ್ಟಿ, ಶರಣಗೌಡ ಪಾಟೀಲ ರಾಸಣಗಿ, ಮಲ್ಲಿಕಾರ್ಜುನ ಸೊನ್ನ, ಚಿತ್ರಶೇಖರ ತುಂಬಗಿ, ನರೇಶ ಚಂದುಕರ್, ಅಖಂಡು ಶಿವಣ್ಣಿಕರ್, ಸಾಹೇಬಗೌಡ ಹಿರೇಗೌಡ ಚಿಕ್ಕಜೇವರ್ಗಿ, ಸಂಗನಗೌಡ ರದ್ದೇವಾಡಗಿ, ಈರಣ್ಣ ಮಾಲಿಪಾಟೀಲ, ಈರಣ್ಣ ಹರವಾಳ, ಗುರು ಪತ್ತಾರ ಹಾಗೂ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಭಾಗವಹಿಸಿದ್ದರು.