ಕೊರಟಗೆರೆ: ಹೇಮಾವತಿ ಎಕ್ಸ್ಪ್ರೆಸ್ ಕೆನಾನ್ ತುಮಕೂರು ಜಿಲ್ಲೆಯ ರೈತರ ಪಾಲಿನ ಮರಣಶಾಸನ. ರಾಜ್ಯ ಸರಕಾರಕ್ಕೆ ಕಲ್ಪತರು ನಾಡಿನ ರೈತರ ನೀರಾವರಿಯ ಕೂಗು ಮುಟ್ಟುತ್ತೆ ಅಂದುಕೊಂಡು ಕೊರಟಗೆರೆ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಕೊರಟಗೆರೆ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಪವನಕುಮಾರ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಕೊರಟಗೆರೆ ನೀರಾವರಿ ಹೋರಾಟ ಸಮಿತಿ ಮತ್ತು ವಿವಿಧ ರೈತಪರ-ಕನ್ನಡಪರ ಸಂಘಟನೆಗಳಿಂದ ಸೋಮವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಕೊರಟಗೆರೆ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ವೆಂಕಟಾಚಲಯ್ಯ ಮಾತನಾಡಿ ಹೇಮಾವತಿ ನೀರಿಗಾಗಿ ತುಮಕೂರು ಜಿಲ್ಲೆ ಬಂದ್‌ಗೆ ಕರೆ ನೀಡಲಾಗಿದೆ. ರೈತರು 1 ಸಾವಿರ ಅಡಿ ಕೊಳವೆಬಾವಿ ಕೊರೆದರೂ ನೀರು ಸೀಗದೇ ಪ್ಲೋರೈಡ್‌ಯುಕ್ತ ನೀರು ಕುಡಿದು ನಾನಾ ಖಾಯಿಲೆ ಬರ್ತಿವೆ. ರೈತಾಪಿ ವರ್ಗದ ಜೊತೆಯಲ್ಲಿ ಆಟೋ, ಬಸ್ ಮತ್ತು ಅಂಗಡಿ ಮಾಲೀಕರು ಬೆಂಬಲ ನೀಡಬೇಕಿದೆ ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಪ.ಪಂ. ಸದಸ್ಯರಾದ ಲಕ್ಷ್ಮೀನಾರಾಯಣ, ಪುಟ್ಟನರಸಪ್ಪ, ಮುಖಂಡರಾದ ನರಸಿಂಹರಾಜು, ಮಲ್ಲಣ್ಣ, ದಾಡಿವೆಂಕಟೇಶ್, ಸುಶೀಲಮ್ಮ, ರಮೇಶ್, ಲಕ್ಷ್ಮೀಶ್, ಪಾರುಕ್, ರವಿಕುಮಾರ್, ಗುರುಧತ್, ದಿನೇಶ್, ಕಾಂತರಾಜು, ನಟರಾಜು, ರಾಜು, ಹಯಾತ್‌ಖಾನ್, ಸಂಜೀವರೆಡ್ಡಿ, ಜಗದೀಶ್ ಸೇರಿದಂತೆ ಇತರರು ಇದ್ದರು.
ಗೃಹಸಚಿವ ಮತ್ತು ಸಹಕಾರಿ ಸಚಿವರು ತುಮಕೂರು ಜಿಲ್ಲೆಯ ರೈತರ ಧ್ವನಿ ಆಗಬೇಕಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಕುಣಿಗಲ್ ಶಾಸಕ ರಂಗನಾಥ್ ಒತ್ತಡಕ್ಕೆ ನಮ್ಮ ಜಿಲ್ಲೆಯ ಸಚಿವರು ಮಣಿಯದೇ ನಮ್ಮ ನೀರಾವರಿ ಯೋಜನೆಗೆ ಶಕ್ತಿ ಆಗಬೇಕಿದೆ. ಬಯಲುಸೀಮೆ ಪ್ರದೇಶದ ನೀರಾವರಿ ಯೋಜನೆಗೆ ಹೇಮಾವತಿ ಎಕ್ಸ್ಪ್ರೇಸ್ ಕೇನಾಲ್ ದೊಡ್ಡ ಆಘಾತ ನೀಡುತ್ತೆ. -ಹನುಮಂತರೆಡ್ಡಿ. ರೈತ. ಕೊರಟಗೆರೆ