Advertisement

Pavagada: ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ಮಹಿಳೆ ಸಾವು

04:26 PM Sep 14, 2024 | Team Udayavani |

ಪಾವಗಡ: ಆಕಸ್ಮಿಕವಾಗಿ 11 ಕೆವಿ ಲೈನ್ ತಗುಲಿ ಮಹಿಳೆಯೊಬ್ಬರು ಸುಟ್ಟು ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಸೆ.14ರ ಶನಿವಾರ ಮುಂಜಾನೆ 8 ಗಂಟೆ ಸುಮಾರಿಗೆ ನಡೆದಿದೆ.

Advertisement

ತ್ರಿವೇಣಿ (23) ಮೃತಪಟ್ಟ ಮಹಿಳೆ.

ತ್ರಿವೇಣಿಗೆ ಕೊತ್ತೂರು ಗೊಲ್ಲರಹಟ್ಟಿಯ ದವಡಬೆಟ್ಟದ ಕೃಷ್ಣಮೂರ್ತಿ ಅವರೊಂದಿಗೆ ಮದುವೆಯಾಗಿದ್ದು, ಒಂದು ವರ್ಷದ ಹೆಣ್ಣು ಮಗು ಕೂಡ ಇದೆ.

content-img

ಈ ದಂಪತಿ ನೂತನ ಗೃಹ ನಿರ್ಮಾಣ ಮಾಡಿದ್ದು, ಮನೆಯ ಮಹಡಿ ಮೇಲೆ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕಬ್ಬಿಣದ ವಸ್ತುವನ್ನು ಎತ್ತಿಡುವ ವೇಳೆ 11 ಕೆವಿ ಲೈನ್ ಗೆ ತಗುಲಿ ಈ ಘಟನೆ ಸಂಭವಿಸಿದೆ.

Advertisement

ವಿದ್ಯುತ್ ಇಲಾಖೆಯವರ ನಿರ್ಲಕ್ಷ್ಯತನದಿಂದ ಈ ಘಟನೆ ಸಂಭವಿಸಿದೆ ಎಂಬುದು ಸ್ಥಳೀಯರ ಆರೋಪ. ತ್ರಿವೇಣಿ ಅವರ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.

ಶಾಸಕ ಹೆಚ್.ವಿ. ವೆಂಕಟೇಶ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹದ ಅಂತಿಮ ದರ್ಶನ ಪಡೆದು ಮೃತರ ಕುಟುಂಬದವರನ್ನು ಸಂತೈಸಿದರು. ತಾಯಿಯನ್ನು ಕಳೆದುಕೊಂಡಿದ್ದ ಮಗುವನ್ನು ಎತ್ತಿಕೊಂಡು ಸಂತೈಸುವ ವೇಳೆ ಭಾವುಕರಾದರು. ನಂತರ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಆದಷ್ಟು ಬೇಗನೆ ಪರಿಹಾರ ಕೊಡಿಸುವಂತೆ ಸೂಚಿಸಿದರು. ವೈಯಕ್ತಿಕವಾಗಿ ಎಲ್ಲಾ ರೀತಿಯ, ಸಹಕಾರ, ನೆರವು ನೀಡುತ್ತೇನೆಂದು ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.