Advertisement
ಸಂಜೆ ಶಿರಾಳಕೊಪ್ಪ ಹತ್ತಿರದ ನೇರಲಗಿ ಸಮುದಾಯ ಭವನದಲ್ಲಿ ಬೃಹತ್ ಪ್ರಮಾಣದಲ್ಲಿ ಸೇರಿದ್ದ ರೈತರನ್ನುದ್ದೇಶಿಸಿ ಶಾಸಕ ಬಿ.ವೈ. ರಾಘವೇಂದ್ರ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಈ ಭಾಗದ ರೈತರು ತೀವ್ರ ಬರಗಾಲದಿಂದ ಬಳಲುತ್ತಿದ್ದಾರೆ. ಈ ಭಾಗದಲ್ಲಿ ನೀರಾವರಿ ಮೂಲಗಳಿಲ್ಲ. ಕೊಳವೆ ಬಾವಿ ನಂಬಿದ್ದ ರೈತರಿಗೆ ಅಂತರ್ಜಲವಿಲ್ಲದೇ ಕೊಳವೆಬಾವಿಗಳು ಬತ್ತಿ ಹೋಗಿವೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಂಭವವಿದೆ ಎಂದರು.
Related Articles
Advertisement
ಸ್ಥಳಕ್ಕೆ ಭೇಟಿ ನೀಡಲು ಆಗಮಿಸಿದ ಕೇಂದ್ರ ನೀರಾವರಿ ಯೋಜನೆಯ ಮುಖ್ಯ ಅಭಿಯಂತರ ಆರ್.ಕೆ. ಜೈನ್ ಸಭೆಯನ್ನುದ್ದೇಶಿಸಿ ಮಾತನಾಡಿ, ಇಲ್ಲಿಯ ಪರಿಸ್ಥಿತಿ ನಮ್ಮ ಮನಕ್ಕೆ ಬಂದಿದೆ. ಯಡಿಯೂರಪ್ಪನವರು ಕೇಂದ್ರ ಸಚಿವೆ ಉಮಾಭಾರತಿ ಅವರಿಗೆ ಮನವಿ ಕೊಟ್ಟ ಬೆನ್ನಲ್ಲೇ ಕರ್ನಾಟಕಕ್ಕೆ ಭೇಟಿ ಕೊಟ್ಟು ಸರ್ವೆ ಮಾಡಿಕೊಂಡು ಬರಲು ತಿಳಿಸಿದ ಹಿನ್ನೆಲೆಯಲ್ಲಿ ಬಂದದ್ದಾಗಿ ತಿಳಿಸಿ, ಇಲ್ಲಿಯ ನೀರಾವರಿ ಯೋಜನೆಬಗ್ಗೆ ಪೂರಕ ವರದಿ ನೀಡಿಸಂಪೂರ್ಣ ಸ್ಪಂದಿಸುವದಾಗಿ ತಿಳಿಸಿದರು. ಹಿರೇಕೆರೂರ ತಾಲೂಕು ಪುರಕ್ಕೆ ಭೇಟಿ:
ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಗೆ ನೀರು ತರುವ ತುಂಗಭದ್ರಾ ನದಿ ಹರಿಯುವ ಪುರಕ್ಕೆ ಶಾಸಕರೊಂದಿಗೆ ಕೇಂದ್ರ ಸಮಿತಿ ಭೇಟಿ ನೀಡಿ ಮಳೆಯಲ್ಲಿಯೇ ಅಲ್ಲಿಯ ನೀರಿನ ಸೌಲಭ್ಯವನ್ನು ವೀಕ್ಷಿಸಿ ತಾಲೂಕಿಗೆ ಬೇಕಾಗುವ ಎಲ್ಲ ನೀರನ ಸೌಲಭ್ಯವನ್ನು ಇಲ್ಲಿಂದಲೇ ಏಕೆ ವ್ಯವಸ್ಥೆ ಮಾಡಬಾರದು ಎಂದು ಚಿಂತಿಸಿ ಸೊಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜಿಲ್ಲಾ ಜಾಗೃತ ದಳದ ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ಯಾವದೇ ಕೆರೆಕಟ್ಟೆಯಲ್ಲಿ ನೀರಿಲ್ಲ ಎಂದರು. ಶಿರಾಳಕೊಪ್ಪ ಪಟ್ಟಣದ ಬಿಜೆಪಿಯಿಂದ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಕೇಂದ್ರ ನಿಯೋಗದೊಂದಿಗೆ ತಂಡದ
ಹಿರಿಯ ಇಂಜನಿಯರ್ ಪಂಕಜ್ ಶರ್ಮ,ಫಣಿರಾಜ್, ಕರ್ನಾಟಕದ ನೀರಾವರಿ ಮುಖ್ಯ ಅಭಿಯಂತರ ಕುಲಕರ್ಣಿ, ತುಂಗಾ ಮೇಲ್ದಂಡೆ ಯೋಜನೆಯ ಇಂಜನಿಯರ್ ಶ್ರೀನಿವಾಸ್, ನಿವೃತ್ತ ಅಭಿಯಂತರ ನಾಗರಾಜ್ , ರಮೇಶ್ ಹಾಗೂ ಜಿಪಂ ಸದಸ್ಯರಾದ ಅಕ್ಷತಾ, ರೇಣುಕಮ್ಮ, ಮಮತಾ ಸಾಲಿ, ಬಿಜೆಪಿ ತಾಲೂಕು ಅಧ್ಯಕ್ಷ ಕೆ. ರೇವಣಪ್ಪ, ಗುರುಮೂರ್ತಿ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಣ್ಣ ಹನುಮಂತಪ್ಪ, ಮಂಚಿ ಶಿವಣ್ಣ, ಚೆನ್ನವೀರ ಶೆಟ್ಟಿ ಮತ್ತಿತರರು ಇದ್ದರು.