Advertisement
ಅನಾರೋಗ್ಯದಿಂದ ಬಳಲುತ್ತಿದ್ದ 51 ವರ್ಷದ ಇರ್ಫಾನ್, ಕೆಲ ದಿನಗಳ ಹಿಂದೆ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆರಂಭದಲ್ಲಿ ಅವರ ಅನಾರೋಗ್ಯಕ್ಕೆ ಕಾರಣಗಳು ತಿಳಿದುಬಂದಿರಲಿಲ್ಲ. ಇದೇ ವೇಳೆ, ತಮಗೆ ಮೆದುಳಿನ ಕ್ಯಾನ್ಸರ್ ಆಗಿರಬಹುದೆಂದು ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ನ್ಯೂರೋ’ ಎಂದಾಕ್ಷಣ ಮೆದುಳಿಗೇ ಸಂಬಂಧ ಪಟ್ಟಿದ್ದೆಂದು ಭಾವಿಸಬೇಕಿಲ್ಲ ಎಂದಿದ್ದಾರೆ.
ನಿರ್ನಾಳ ಗ್ರಂಥಿಗಳು (ಎಂಡೋಕ್ರಿನ್) ಹಾಗೂ ನರಮಂಡಲದ (ನರ್ವಸ್ ಸಿಸ್ಟಂ) ಜೀವಕೋಶಗಳು ಅಸ್ವಾಭಾವಿಕವಾಗಿ ಬೆಳೆಯುವುದರಿಂದ ಇಂಥ ಟ್ಯೂಮರ್ ಸೃಷ್ಟಿಯಾಗುತ್ತದೆ. ಶ್ವಾಸಕೋಶ, ಕರುಳುಗಳಲ್ಲಿ ಹೆಚ್ಚಾಗಿ ಇವು ಕಾಣಿಸಿಕೊಳ್ಳುತ್ತವೆ. ಹೆಚ್ಚು ರಕ್ತದೊತ್ತಡ, ಅನಗತ್ಯ ಆತಂಕ, ಜ್ವರ, ತಲೆನೋವು, ವಿಪರೀತ ಬೆವರುವುದು, ಊಟದ ವಿಚಾರದಲ್ಲಿ ವಾಕರಿಕೆ, ವಾಂತಿ, ಚರ್ಮ ತೇವಾಂಶ ಹೆಚ್ಚಳ, ವೇಗದ ನಾಡಿಮಿಡಿತ, ಹೆಚ್ಚು ಎದೆಬಡಿತ ಇತ್ಯಾದಿ ಲಕ್ಷಣಗಳು ಈ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಟ್ಯೂಮರ್ ಗಾತ್ರ, ಗಂಭೀರತೆ ಆಧಾರದಲ್ಲಿ ಸರ್ಜರಿ, ರೇಡಿಯೇಷನ್, ಕಿಮೋಥೆರಪಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.