Advertisement
ಕಮಲಶಿಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಮರವಂತೆಯಲ್ಲಿ ಹೊಸ ಕಾಮಗಾರಿ ಟೆಂಡರ್ ಆಗಿದೆ. ಹಳೆಯ ಕಾಮಗಾರಿ ಮುಗಿದು 3 ವರ್ಷದಲ್ಲಿ ಶಿಥಿಲಗೊಂಡಿದೆ. ಇಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸ ಬೇಕು ಹಾಗೂ ಬೇಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಗಳಿಗೆ ನೋಟಿಸ್ ನೀಡಬೇಕು ಎಂದು ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿಗಳಿಗೆ ತಿಳಿಸಿದರು.ಬೈಂದೂರು ತಾ| ಆಸ್ಪತ್ರೆ ಸಂಕೀರ್ಣ ನೀಲನಕಾಶೆ ವೀಕ್ಷಿಸಿ ವಿವಿಧ ಕಚೇರಿ ಗಳನ್ನು ಒಂದೇ ವಲಯದಲ್ಲಿ ಪ್ರಾರಂಭಿಸ ಬೇಕಾಗಿರುವುದರಿಂದ ಭವಿಷ್ಯದ ಯೋಚನೆ ಮನಗಂಡು ಯೋಜನೆ ರೂಪಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಬಿಎಸ್ಸೆನ್ನೆಲ್ ನಿರ್ವಹಣೆ ಕೊರತೆಯಿಂದ ಸ್ತಬ್ಧಗೊಳ್ಳುತ್ತಿದೆ. ಆದರೆ ಗ್ರಾಮೀಣ ಭಾಗ ದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸಭೆಯಲ್ಲಿ ಹಾಜರಿದ್ದ ಜಿಯೋ ಹಾಗೂ ಏರ್‌ಟೆಲ್ ಪ್ರತಿನಿಧಿಗಳಿಗೆ ಜಿಲ್ಲಾಡಳಿತ, ಗ್ರಾಮ ಪಂಚಾಯತ್ ಪೂರಕವಾಗಿ ಸ್ಪಂದಿಸಲು ತಿಳಿಸಿದರು.
Related Articles
Advertisement
ಹೆದ್ದಾರಿ ಅಧಿಕಾರಿಗಳು ಗೈರು ಈ ಹಿಂದೆ ಬೈಂದೂರಿನಲ್ಲಿ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿಯೂ ಹೆದ್ದಾರಿ ಅಧಿಕಾರಿಗಳು ಹಾಜರಾಗಿರಲಿಲ್ಲ. ಈಗ ಕೂಡ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆಯಲ್ಲಿ ಉಪಸ್ಥಿತರಿರಲಿಲ್ಲ. ಇದುವರೆಗೆ ನಿರ್ಮಾಣವಾಗದ ಸರ್ವಿಸ್ ರಸ್ತೆ ಹಾಗೂ ಶಿರೂರಿನಲ್ಲಿ ಟೋಲ್‌ಗೇಟ್ ಆರಂಭಿಸುವ ಸಿದ್ಧತೆಯಲ್ಲಿದ್ದು ಸ್ಥಳೀಯರಿಗೆ ರಿಯಾಯಿತಿ ನೀಡಲು ಮನವಿಗಳಿದ್ದು ಅಧಿಕಾರಿಗಳು ಗೈರು ಹಾಜರಾದ ಕಾರಣ ಪತ್ರ ಬರೆಯಲು ಸಭೆಯಲ್ಲಿ ತಿಳಿಸಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಜಿ. ಜಗದೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹೊÉàಟ್, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ರಾಜಪ್ಪ, ಶ್ರೀರಂಗಯ್ಯ, ಕುಂದಾಪುರ ಡಿ.ವೈ.ಎಸ್.ಪಿ. ಹರಿರಾಮ್ ಶಂಕರ್, ಬೈಂದೂರು ತಹಶೀಲ್ದಾರ ಬಿ.ಪಿ. ಪೂಜಾರ್, ಜಿ.ಪಂ. ಹಾಗೂ ತಾ.ಪಂ. ಸದಸ್ಯರು ಉಪಸ್ಥಿತರಿದ್ದರು.ಕುಂದಾಪುರ ತಹಶೀಲ್ದಾರ ತಿಪ್ಪೇಸ್ವಾಮಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.