Advertisement

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ; ಕಡತಗಳು ಮಾಯ

06:35 PM Dec 16, 2020 | sudhir |

ಗಂಗಾವತಿ: ನಗರಸಭೆ ಸಮಸ್ಯೆಗಳ ಆಗಾರವಾಗಿದ್ದು, ಸಾರ್ವಜನಿಕರು ನಿತ್ಯವೂ ಕೆಲಸ ಕಾರ್ಯಗಳಿಗಾಗಿ ಅಲೆದಾಡಿ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ನಗರಸಭೆ ವ್ಯಾಪ್ತಿಯ ವಾರ್ಡ್‌ಗಳ ಮನೆ ಮತ್ತು ಖಾಲಿ ಜಾಗ ಮುಟೇಶನ ಹಾಗೂ ಫಾರಂ-3 ಪ್ರಮಾಣಪತ್ರ ಪಡೆಯಲು ಜನತೆ ಇನ್ನಿಲ್ಲದ ಕಸರತ್ತು ನಡೆಸಬೇಕಾದ ಸ್ಥಿತಿ ಕಳೆದ ನಾಲ್ಕೈದು ತಿಂಗಳಿಂದ ಇದೆ. ಪೌರಾಯುಕ್ತರ ಬದಲಾವಣೆ ಅಧಿಕಾರಿಗಳ ವರ್ಗಾವಣೆಯಾದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಜನರು ವಿವಿಧ ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲೆ ಸಮೇತ ಸಲ್ಲಿಸಿರುವ ಅರ್ಜಿಯ ಕಡತವೇ ಸಂಬಂಧಪಟ್ಟ ವಿಭಾಗದಲ್ಲಿ ನಾಪತ್ತೆಯಾಗುತ್ತಿದ್ದು, ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರು ಎರಡು ಮೂರು ಬಾರಿ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಳೆದ 15-20 ವರ್ಷಗಳಿಂದ ನಗರಸಭೆಯಲ್ಲಿ ಠಿಕಾಣಿ ಹೂಡಿದ್ದ ಅಧಿಕಾರಿಗಳಿಂದ
ಕೆಲಸಗಳು ನನೆ‌ಗುದಿಗೆ ಬೀಳುತ್ತಿವೆ ಎಂದು ಜಿಲ್ಲಾಧಿಕಾರಿಗಳು ಇಲ್ಲಿಯ 10 ಅಧಿಕಾರಿಗಳನ್ನು ಕುಷ್ಟಗಿ, ಕನಕಗಿರಿ, ಕಾರಟಗಿ, ಯಲಬುರ್ಗಾ ಪಟ್ಟಣ ಪಂಚಾಯಿತಿ, ಪುರಸಭೆಗೆ ವರ್ಗಾವಣೆ ಮಾಡಿ ಅಲ್ಲಿಯ ಸಿಬ್ಬಂದಿಯನ್ನು ಗಂಗಾವತಿ ನಗರಸಭೆಗೆ
ವರ್ಗಾವಣೆ ಮಾಡಿ ಎರಡು ತಿಂಗಳಾಗಿದೆ. ಆದರೂ ಕಂದಾಯ ವಿಭಾಗದ ಕೆಲಸ ಕಾರ್ಯ ಸುಸೂತ್ರವಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಇದನ್ನೂ ಓದಿ:ಹಿರಿಯ ನಾಗರಿಕರಿಗೆ ಏರ್‌ ಇಂಡಿಯಾದ ಭರಪೂರ ಕೊಡುಗೆ!

ಕ್ರಮ ಕೈಗೊಂಡಿಲ್ಲ: ಕಂದಾಯ ವಿಭಾಗದಲ್ಲಿ ಸರಿಯಾಗಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಕೆಲ ಅಧಿಕಾರಿಗಳು ಸಾರ್ವಜನಿಕರ ಜತೆ ಸರಿಯಾಗಿ, ಸೌಜನ್ಯದಿಂದ ವರ್ತಿಸುತ್ತಿಲ್ಲ. ಬೇರೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ನೂತನ ಆಡಳಿತ ಮಂಡಳಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ ಎಂದು ನಗರಸಭೆ ಸದಸ್ಯ ಶಾಮೀದ್‌ ಮನಿಯಾರ್‌ ಆರೋಪಿಸಿದ್ದಾರೆ.

– ಕೆ. ನಿಂಗಜ್ಜ

Advertisement
Advertisement

Udayavani is now on Telegram. Click here to join our channel and stay updated with the latest news.

Next