Advertisement

ಅವ್ಯವಹಾರ: ತಡೋಳಾ ಗ್ರಾಪಂ ಕಚೇರಿ ಎದುರು ಧರಣಿ

11:57 AM Jan 28, 2020 | Team Udayavani |

ಆಳಂದ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಡೋಳಾ ಗ್ರಾಪಂ ಕಚೇರಿ ಎದುರು ಪ್ರಗತಿಪರರು ಹಾಗೂ ಆಯ್ದ ಸದಸ್ಯರು ಸೇರಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

Advertisement

14ನೇ ಹಣಕಾಸು ಅಡಿಯಲ್ಲಿ ಖಂಡಾಳ ಗ್ರಾಮ ವಿಕಾಸ ಅನುದಾನ 7.5 ಲಕ್ಷ ಹಣ ಎತ್ತಿ ಹಾಕಿದ್ದು, ಮರು ಪಾವತಿಸಲು ಕಳೆದ ಮೂರು ವರ್ಷದ ಹಿಂದೆ ಪ್ರತಿಭಟನೆ ಕೈಗೊಂಡಾಗ ಲೆಕ್ಕ ವಿಭಾಗದಿಂದ 6.76 ಲಕ್ಷ ರೂ. ಅವ್ಯವಹಾರ ಪತ್ತೆಯಾಗಿತ್ತು. ಆಗ ಸಂಬಂಧಿ ತ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಕೈಗೊಳ್ಳಲಾಯಿತು. ಎರಡು ವರ್ಷದ ಬಳಿಕ ಇದೇ ಅಧಿಕಾರಿಯನ್ನು ಮತ್ತೆ ತಡೋಳಾ ಗ್ರಾಪಂಗೆ ನಿಯೋಜಿಸಲಾಗಿದೆ. ಈ ನಿಯೋಜಿತ ಅಧಿಕಾರಿ 2 ತಿಂಗಳಲ್ಲೇ ಮತ್ತೆ 2 ಲಕ್ಷ ರೂಪಾಯಿ ಅವ್ಯವಹಾರ ಎಸಗಿದ್ದು, ಇಂಥ ಅಧಿಕಾರಿಯನ್ನ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಮೊಹ್ಮದ್‌ ಸಲೀಂ ಮನವಿ ಸ್ವೀಕರಿಸಿ, ಎರಡು ದಿನಗಳಲ್ಲಿ ಸಮಿತಿ ರಚಿಸಿ ಗ್ರಾಪಂ ಅವ್ಯವಹಾರ ಪರಿಶೀಲಿಸಲಾಗುವುದು. ಧರಣಿ ಹಿಂದಕ್ಕೆ ಪಡೆಯಬೇಕು ಎಂದು ಮನವಿ ಮಾಡಿದರು. ಆದರೆ, ಧರಣಿನಿರತರು ಸಮಿತಿ ರಚಿಸಿ ಅವ್ಯವಹಾರ ಕುರಿತು ಪರಿಶೀಲನೆ ಆರಂಭಿಸುವ ತನಕ್ಕ ಧರಣಿ ಮುಂದುವರಿಸಲಾಗುವುದು ಎಂದು ಪಟ್ಟು ಹಿಡಿದರು.

ಗ್ರಾಮದ ಹಿರಿಯ ಮುಖಂಡ ಮೌಲಾ ಮುಲ್ಲಾ, ಅಜೀತ ಆರ್‌. ಪಾಟೀಲ, ಮಹಾವೀರ ಕಾಂಬಳೆ, ಮಹಾದೇವ ಸಿಂದೆ, ಮೈಲಾರಿ ಜೋಗೆ, ಆಶಾ ಕ ಮುಲ್ಲಾ, ಗ್ರಾಪಂ ಸದಸ್ಯ ಉಮೇಶ ಘೋಡಕೆ, ಯಾದವ ಜಾಧವ, ಗ್ರಾಪಂ ಸದಸ್ಯ ಅಜೀತ ಪಟೇಲ ಹಾಗೂ ವಿಜಯಕುಮಾರ ಕಾಂಬಳೆ, ಭೀಮಸೇನ ಜಮಾದಾರ, ಜೈಭೀಮ ಗಾಯಕವಾಡ, ಪಾಂಡುರಂಗ ಸಿಂಧೆ ಸೇರಿದಂತೆ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next