ಕುಂಬಳೆ: ಮೊಗ್ರಾಲ್ ಎಂ.ಸಿ.ಅಬ್ದುಲ್ ಖಾದರ್ ಹಾಜಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೊಗ್ರಾಲ್ ಕೆ.ಎಸ್.ಅಬ್ದುಲ್ಲ ಸೆಂಟ್ರಲ್ ವಿದ್ಯಾಲಯದಲ್ಲಿ ಕ್ಯಾನ್ಸರ್ ರೋಗ ತಪಾಸಣಾ ಶಿಬಿರ ಮತ್ತು ಮಾಹಿತಿ ಶಿಬಿರ ಜರಗಿತು..
ಮಂಗಳೂರು ಯೇನಪೋಯ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ವೈದ್ಯಡಾ.ಇಬ್ರಾಹಿಂ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ ನಿಯಂತ್ರಣವಿಲ್ಲದ ಆಹಾರ ಸೇವನೆ,ಮದ್ಯಮಾದಕ ವಸ್ತುಗಳ ಬಳಕೆಯಿಂದ ಈ ಮಾರಕ ರೋಗ ಕಾಡಲು ಕಾರಣವಾಗುವುದು ಎಂದರು.
ದಿನನಿತ್ಯ ಕಾಸರಗೋಡು ಜಿಲ್ಲೆಯಿಂದ ಹತ್ತಾರು ಕ್ಯಾನ್ಸರ್ ಚಿಕಿತ್ಸೆಗೆ ರಾಜ್ಯಸಹಿತ ಅನ್ಯ ರಾಜ್ಯಗಳಿಗೆ ತೆರಳುವರು.ಆದರೆ ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ವಿಳಂಬದಿಂದಲಾಗಿ ಕ್ಯಾನ್ಸರ್ ರೋಗಿಗಳ ಸಾವಿಗೆ ಕಾರಣವಾಗುವುದು.ಜಿಲ್ಲೆಯಲ್ಲಿ ಕ್ಯಾನ್ಸರ್ ವರ್ಷದಿಂದ ವರ್ಷಕ್ಕೆ ರೋಗ ವೃದ್ಧಿಸುತ್ತಿರುವುದು ಆತಂಕಕಾರಿಯಾಗಿದೆ.ಈ ಮಾರಕ ರೋಗವನ್ನು ತಡೆಯಲು ಸರಕಾರ,ಸ್ಥಳೀಯಾಡಳಿತೆಗಳು ಮತ್ತು ಸಂಘಸಂಸ್ಥೆಗಳು ಮುಂದಾಗಬೇಕಾಗಿದೆ.ರೋಗ ನಿಯಂತ್ರಣಕ್ಕೆ ಪ್ಲಾಸ್ಟಿಕ್ ಉರಿಸುವುದನ್ನು ತಡೆಯಲು ನಾಗರಿಕರಲ್ಲಿ ಪ್ರಜ್ಞೆ ಮೂಡಿಸಬೇಕಿದೆ.ರೋಗಿಗಳಿಗೆ ತಕ್ಷಣ ಚಿಕಿತ್ಸೆ ದೊರೆಯಲು ಸಂಘ ಸಂಸ್ಥೆಗಳು ಮುಂದಾಗಬೇಕೆಂದರು.
ಮಾಹಿತಿ ಶಿಬಿರದಲ್ಲಿ ಟ್ರಸ್ಟ್ ಅಧ್ಯಕ್ಷ ಎಂ.ಸಿ.ಕುಞ್ಞಮ್ಮದ್ ಹಾಜಿ,ಉಪಾಧ್ಯಕ್ಷ ಎಂ.ಖಾಲಿದ್ ಹಾಜಿ,ಪ್ರಮುಖರಾದ ಎಂ.ಎಂ.ಪೆರ್ವಾಡ್,ಎಂ.ಮಾಹಿನ್ ಮಾಸ್ಟರ್,ಟಿ.ಸಿ.ಅಶ್ರಫಾಲಿ,ಟಿ.ಸಿ.ಎಂ.ಶರೀಫ್,ಎಂ.ಸಿ.ಅಕºರ್ ಪೆರ್ವಾಡು,
ಎಂ.ಸಿ.ಯಹ್ಯಾ,ಫಸೀಲಾ ಅಬ್ಟಾಸ್,ನಸೀಮಾ ಆಬ್ದುಲ್ ಖಾದರ್.ಗಫೂರ್,ಅಬ್ದುಲ್ ರಹಿಮಾನ್,ಹಮೀದ್ ಪೆರ್ವಾಡ್,
ಕೆ.ಕೆ.ಸಕೀರ್,ಯೂಸುಫ್ ಹಾಜಿ,ಅಬ್ದುಲ್ ರಜಾಕ್,ವಿ.ವಿ.ಅಬ್ಟಾಸ್ ಮೊಯಿಲಾರ್,ಎಂ.ಪಿ.ಅಬ್ದುಲ ಖಾದರ್,ಎಚ್.ಎಂ.ಕರೀಂ,
ಬಿ.ಎ.ಮುಹಮ್ಮದ್ ಕುಂಞಿ,ಎಂ.ಎ,ಮೂಸಾ,ಎಂ.ಪಿ.ಮುಸ್ತಫಾ,.ಎ.ಇಕ್ಬಾಲ್,ಪಿ.ವಿ.ಅನ್ವರ್,ಅಬ್ದುಲ್ ರಹಿಮಾನ್,ಎಂ.ಎ.ಮಹಮ್ಮದ್ ಮಾಸ್ಟರ್,ಅಶ್ರಫ್ ಪೆರ್ವಾಡ್,ರಿಯಾಸ್ ಮೊಗ್ರಾಲ್,ಎಂ.ಎ.ರಹಿಮಾನ್,ಶರೀಫ್ ಗಲ್ಲಿ ಲತೀಫ್ ತವಕ್ಕಲ್‌ಉಪಸ್ಥಿತರಿದ್ದು ಚರ್ಚೆಯಲ್ಲಿ ಭಾಗವಹಿಸಿದರು.