Advertisement

Government ಸಹ ಶಿಕ್ಷಕರ ನೇಮಕಾತಿ ಅಕ್ರಮ: ನಿವೃತ್ತ ಅಧಿಕಾರಿಗಳ ವಿಚಾರಣೆಗೆ ಅನುಮತಿ

10:48 PM Oct 14, 2023 | Team Udayavani |

ಬೆಂಗಳೂರು: 1993 -94ರ ಸಾಲಿನ ಮೈಸೂರು ವಿಭಾಗದ ಪ್ರೌಢ ಶಾಲಾ ಸಹ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಿಸಿ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಮತ್ತಿತರ ಅಧಿಕಾರಿಗಳ ವಿಚಾರಣೆ ನಡೆಸಲು ಸಿಐಡಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ.

Advertisement

ಸುಮಾರು 29 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವಿಭಾಗೀಯ ಕಾರ್ಯದರ್ಶಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರನ್ನು ಬಳಿಕ ಸಿಐಡಿಗೆ ವರ್ಗಾಯಿಸಲಾಗಿತ್ತು. ಸಿಐಡಿಯು ನಿವೃತ್ತ ಜಂಟಿ ನಿರ್ದೇಶಕ ವೈ. ಜಿ. ಸತ್ಯನಾರಾಯಣ, ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ಬಿ. ಜಿ. ರಂಗೇಗೌಡ ಅವರನ್ನು ವಿಚಾರಣೆ ನಡೆಸಲು ಅನುಮತಿ ನೀಡಿದೆ.

ಮೈಸೂರು ವಿಭಾಗದ ಪ್ರೌಢ ಶಾಲೆಗಳಲ್ಲಿನ ಸಹ ಶಿಕ್ಷಕರ ಕೊರತೆ ತುಂಬಲು 1994ರ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಿ ನೇಮಕಾತಿ ನಡೆಸಲಾಗಿತ್ತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಚನ್ನಪಟ್ಟಣದ ಬಿ. ಎನ್‌. ಶಿವಪ್ಪ, ಬಿ. ಎನ್‌. ಯೋಗಣ್ಣ, ಹಾಸನದ ಕಾವೇರಿ ಮತ್ತು ಮೋಹಿನಿ ಎಂಬವರು ತಮ್ಮ ನೈಜ ಪದವಿ ಅಂಕಗಳಿಗಿಂತ ಹೆಚ್ಚಿನ ಆಂಕ ಸಲ್ಲಿಸಿ ನೇಮಕಗೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳು ನೀಡಿದ್ದ ಮಾಹಿತಿ ಮತ್ತು ದಾಖಲೆಗಳನ್ನು ಪರಿಶೀಲಿಸದೆ ನೇಮಕಾತಿ ನಡೆಸಿ ಕರ್ತವ್ಯ ಲೋಪ ಎಸಗಿರುವ ಹಾಗೆಯೇ ದಾಖಲೆಗಳನ್ನು ಮರೆಮಾಚಿ ಅನರ್ಹ ಅಭ್ಯರ್ಥಿಗಳು ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಿದ ಆರೋಪ ದಾಖಲಾಗಿದೆ. ಈ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಸಿಐಡಿಯು ರಾಜ್ಯ ಸರಕಾರವನ್ನು ಕೋರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next