Advertisement
ಈ ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ ಫಲಕ, ಸಮ್ಮಾನ ಪತ್ರಗಳನ್ನೊಳಗೊಂಡಿದೆ. ಇತ್ತೀಚೆಗೆ ಬಿಲ್ಲವ ಭವನದಲ್ಲಿ ಯಕ್ಷಗಾನದ ಹಿರಿಯ ಸಂಘಟಕ ಕಲಾವಿದ ಎಚ್.ಬಿ.ಎಲ್. ರಾವ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ನಿರ್ಣಾಯಕ ಸಮಿತಿಯು ಈ ನಿರ್ಧಾರ ಪ್ರಕಟಿಸಿದೆ. ಐರೋಡಿ ಗೋವಿಂದಪ್ಪ ಅವರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿರುವ ಐದು ದಶಕಗಳ ಸೇವೆಯನ್ನು ಗಮನಿಸಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ತೆಂಕು ಮತ್ತು ಬಡಗು ಉಭಯ ತಿಟ್ಟುಗಳಲ್ಲೂ ಪ್ರಸಿದ್ಧವಾಗಿರುವ ಐರೋಡಿ ಗೋವಿಂದಪ್ಪನವರು ಹಾರಾಡಿ ಪರಂಪರೆಯ ಕಲಾವಿದ. ಗೋಳಿಗರಡಿ, ಪೆರ್ಡೂರು, ಸಾಲಿಗ್ರಾಮ, ಕಣಿಪುರ, ಕುತ್ಯಾಳ, ಇರಾ ಸೋಮೇಶ್ವರ, ಮುಲ್ಕಿ, ಕುಂಬಳೆ ಮುಂತಾದ ಮೇಳಗಳಲ್ಲಿ ಸುಮಾರು ಐದು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಪಾತ್ರಕ್ಕೆ ತಕ್ಕ ವೇಷಭೂಷಣ, ಗತ್ತಿನ ರಂಗಪ್ರವೇಶ ನಿರ್ಗಮನ, ಮಟಪಾಡಿ ಶೈಲಿಯ ಹೆಜ್ಜೆಗಾರಿಕೆ, ಪದದ ಎತ್ತುಗಡೆ ಐರೋಡಿಯವರ ವೈಶಿಷ್ಟéಗಳು. ಕರ್ಣ, ಮಾರ್ಕೆಂಡೇಯ, ವೀರಮಣಿ, ವಿಭೀಷಣ, ಭೀಷ್ಮ, ಅರ್ಜುನ, ಜಾಂಬವ, ಭೀಮ, ಋತುಪರ್ಣ ಇವರ ಪ್ರಸಿದ್ಧ ಪಾತ್ರಗಳು. ತಂದೆ ಬೂದ ಭಾಗವತ ತಾಯಿ ಗೌರಿ ಪೂಜಾರಿ¤ ದಂಪತಿಯ ಪುತ್ರರಾಗಿರುವ ಐರೋಡಿ ಗೋವಿಂದಪ್ಪನವರು ತಂದೆಯವರಿಂದ ಭಾಗವತಿಕೆ ಹಾಗೂ ಹೆಜ್ಜೆಗಾರಿಕೆಯನ್ನು ಕಾಂತಪ್ಪ ಮಾಸ್ತರರಿಂದ ಕಲಿತು ಗೋಳಿಗರಡಿ ಮೇಳ ಪ್ರವೇಶಿಸಿದರು. ಅನಂತರ ಅವರು ಹಿಂತಿರುಗಿ ನೋಡಲಿಲ್ಲ. ಹಲವಾರು ಮೇಳಗಳಲ್ಲಿ ವೇಷ ಹಾಕಿ ಕೀರ್ತಿಯ ಶಿಖರವೇರಿದರು. 1985ರಲ್ಲಿ ಕೆ. ಎಸ್. ಉಪಾಧ್ಯ ನೇತೃತ್ವದ ತಂಡದಲ್ಲಿ ವಿದೇಶಕ್ಕೆ (ಹಾಂಕಾಂಗ್) ಹೋಗಿ ವೇಷ ಮಾಡಿದ ಹೆಗ್ಗಳಿಕೆ ಇವರಿಗಿದೆ. 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ದೊರಕಿದೆ. ಅಲ್ಲದೆ ಜಾನಪದ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಸದಸ್ಯರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದ್ದಾರೆ.
Related Articles
Advertisement
ಕಾರ್ಯಕ್ರಮದ ಅಂಗವಾಗಿ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಪಾಂಡವಾಶ್ವಮೇಧ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಬಿಲ್ಲವರ ಅಸೋಸಿಯೇಶನಿನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.