Advertisement

ಐರೋಲಿಯ ಹೆಗ್ಗಡೆ ಭವನ ಗುರುಪೂರ್ಣಿಮೆ, ಹರಿಕಥಾ ಕಾಲಕ್ಷೇಪ

01:37 PM Jul 13, 2017 | Team Udayavani |

ನವಿಮುಂಬಯಿ: ಹೆಗ್ಗಡೆ ಸೇವಾ ಸಂಘ ಮುಂಬಯಿ ಇವರ ವತಿಯಿಂದ ಜು.  9ರಂದು ಗುರು ಪೂರ್ಣಿಮೆಯ ಅಂಗವಾಗಿ ಹರಿಕಥಾ ಕಾಲಕ್ಷೇಪವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಐರೋಲಿಯ ಹೆಗ್ಗಡೆ  ಭವನದಲ್ಲಿ ಆಯೋಜಿಸಲಾಗಿತ್ತು.

Advertisement

ಪುರೋಹಿತ ರಮಾಕಾಂತ್‌  ಕುಂಜಿರಾಯ ಭಟ್‌ ಇವರ ಪೌರೋಹಿತ್ವದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರಿಗೆ ವಿಧಿವತ್ತಾಗಿ ಪೂಜೆ ಜರಗಿತು.  ಕಲಶ ಪ್ರತಿಷ್ಠೆ,   ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಪೂಜೆಯನ್ನು ಕೃಷ್ಣಯ್ಯ ಹೆಗ್ಡೆ ವಿರಾರ್‌ ದಂಪತಿಯ  ಯಜಮಾನತ್ವದಲ್ಲಿ ನಡೆಸಲಾಯಿತು.

ನಂತರ ಘನ್ಸೋಲಿ ಶ್ರೀ  ಮೂಕಾಂಬಿಕಾ ದೇವಾಲಯದ ಸದಸ್ಯರಿಂದ ಭಜನೆ ಭಕ್ತಿ ಸಂಗೀತ ಕಾರ್ಯಕ್ರಮ  ನಡೆಯಿತು. ಗುರು ದೇವರ ಮಂಟಪವನ್ನು ಅನಿಲ್‌ ಕುಮಾರ್‌ ಹೆಗ್ಡೆ ನೆರೂಲ್‌ ಇವರ ನೇತೃತ್ವದಲ್ಲಿ ತುಳು ಕೂಟ ಐರೋಲಿ, ಹೆಗ್ಗಡೆ ಸಮಾಜದ ಮಹಿಳೆಯರು ಹಾಗೂ ಸಮಿತಿಯ ಸದಸ್ಯರೆಲ್ಲ ಸೇರಿ ವಿಶೇಷವಾಗಿ ಅಲಂಕರಿಸಿದರು.  ಮಹಾ ಮಂಗಳಾರತಿಯ ನಂತರ ಹಾಲಾಡಿ ರಾಜೀವ ಶೆಟ್ಟಿ ಸರಕಾರಿ ಪಿಯುಸಿ ಕಾಲೇಜಿನ ಉಪನ್ಯಾಸಕ ದಾಸಶ್ರೇಷ್ಠ ಪ್ರೊ| ಗಣಪತಿ ಹೆಗಡೆ ಮತ್ತು ಬಳಗದವರು  ಸುಂದರಕಾಂಡ ಎಂಬ ಪ್ರಸಂಗವನ್ನು ಹರಿಕಥಾ ಕಾಲಕ್ಷೇಪ ರೂಪದಲ್ಲಿ ಪ್ರಸ್ತುತಪಡಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ… ಹೆಗ್ಡೆ, ಗೌರವ ಅಧ್ಯಕ್ಷ ಸಂಜೀವ ಹೆಗ್ಡೆ  ಕಾರ್ಯದರ್ಶಿ ಶಂಕರ್‌  ಹೆಗ್ಡೆ,  ಉಪಾಧ್ಯಕ್ಷರುಗಳಾದ  ಬಿ. ಗೋಪಾಲ… ಹೆಗ್ಡೆ ಮತ್ತು ಜಯರಾಮ ಹೆಗ್ಡೆ ಕಲ್ಯಾಣ್‌, ಜತೆ ಕಾರ್ಯದರ್ಶಿ ರವಿ ಹೆಗ್ಡೆ ಹೆರ್ಮುಂಡೆ, ಕೋಶಾಧಿಕಾರಿ ರಮೇಶ್‌ ಎಂ. ಹೆಗ್ಡೆ , ಜತೆ ಕೋಶಾಧಿಕಾರಿ ಚಂದ್ರಶೇಖರ್‌ ಹೆಗ್ಡೆ ಮತ್ತು  ಆಡಳಿತ ಮಂಡಳಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಹಾಗೂ ಮಾಜಿ ಅಧ್ಯಕ್ಷ ವಿ.  ಎಸ್‌.  ಹೆಗ್ಡೆ ಅವರು ಉಪಸ್ಥಿತರಿದ್ದರು.

ಶ್ರೀ  ಶನೀಶ್ವರ ದೇವಸ್ಥಾನ ನೆರೂಲ್‌ ಇದರ ಕಾರ್ಯಾಧ್ಯಕ್ಷ ಹಾಗೂ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿ ಸಂತೋಷ್‌  ಶೆಟ್ಟಿ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ  ಸುರೇಂದ್ರಕುಮಾರ್‌ ಹೆಗ್ಡೆ,  ತುಳು ಕೂಟ ಐರೋಲಿ ಇದರ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರಿ ಮತ್ತು ಸದಸ್ಯರು, ಶ್ರೀ  ಮೂಕಾಂಬಿಕ ಮಂದಿರ ಘನ್ಸೊಲಿ ಇದರ ಸದಸ್ಯರು ಹಾಗೂ ಹಲವಾರು ಗುರು ಭಕ್ತರು ಉಪಸ್ತಿತರಿದ್ದು ಸಹಕರಿಸಿದರು.  ಕೊನೆಗೆ ತೀರ್ಥಪ್ರಸಾದ, ಮಹಾ ಅನ್ನ ಪ್ರಸಾದ ಜರಗಿತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next