Advertisement

ಐರೋಲಿ ವಿಪಿಎಂ ಇಂಟರ್‌ನ್ಯಾಷನಲ್‌ ಸ್ಕೂಲ್‌ಗೆ ಮರು ನಾಮಕರಣ

12:12 PM Oct 26, 2017 | Team Udayavani |

ಮುಂಬಯಿ: ಐರೋಲಿಯ ವಿಪಿಎಂ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ಮರುನಾಮ ಕರಣ ಕಾರ್ಯಕ್ರಮವು ಅ. 7ರಂದು ಶಾಲಾ ಸಭಾಗೃಹದಲ್ಲಿ ವೈವಿಧ್ಯ ಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಎನ್‌ಎಂಎಂಸಿ ಇದರ ಉಪ ಕಮಿಷನರ್‌ ಎ. ಆರ್‌. ಪಟ್ನಿಗೆರೆ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ನಾಮಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಪಿಎಂ ಇಂಟರ್‌ನ್ಯಾಷನಲ್‌ ಸ್ಕೂಲ್‌ ಪ್ರಸ್ತುತ ವಿಪಿಎಂ ಇಂದಿರಾ ಅರವಿಂದ್‌ ಮೆನನ್‌ ಇಂಟರ್‌ನ್ಯಾಷನಲ್‌ ಆಗಿ ಮರು ನಾಮಕರಣಗೊಂಡಿದ್ದು, ಅರವಿಂದ್‌ ಮೆನನ್‌ ಮತ್ತು ಇಂದಿರಾ ಮೆನನ್‌ ಹಾಗೂ ಅವರ ಪರಿವಾರದವರು ಉಪಸ್ಥಿತರಿದ್ದರು.

ಮುಖ್ಯ ದಾನಿಗಳಾದ ಇಂದಿರಾ ಮೆನನ್‌, ಸಂಸ್ಥೆಯ ಹಾಲಿ ಪದಾಧಿಕಾರಿಗಳಾದ ಪಟ್ನಿಗೆರೆ, ಅರವಿಂದ ಮೆನನ್‌ ಇನ್ನಿತರ ಗಣ್ಯರು, ಟ್ರಸ್ಟಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಕ್ಕಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡವು. ವಿಪಿಎಂ ಸಂಸ್ಥೆಯ ಅಧ್ಯಕ್ಷ ನಿವೃತ್ತ ಜಸ್ಟಿಸ್‌ ಎಚ್‌. ಸುರೇಶ್‌ ಅವರು ಅಧ್ಯಕ್ಷತೆ ವಹಿಸಿದ್ದರು.

ಮಿನಲ್‌ ಕಕಿರ್ಡೆ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಪಿ. ಎಂ. ಕಾಮತ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿ ಅರವಿಂದ್‌ ಮೆನನ್‌ ವಿಪಿಎಂ ಜೊತೆಗಿನ ನಂಟನ್ನು ನೆನಪಿಸಿಕೊಂಡು ಶುಭ ಹಾರೈಸಿದರು. ಜಸ್ಟಿಸ್‌ ಸುರೇಶ್‌ ಅವರು, ಶಾಲೆಯು ನೂತನ ಹೆಸರಿನೊಂದಿಗೆ ನೂತನ ಆಶಯಗಳೊಂದಿಗೆ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಹೇಳಿ ಶುಭ ಹಾರೈಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೋಹಿತ್‌, ಗೋಪಿಕಾ ಪಿಳ್ಳೈ ಅವರು ಸಹಕರಿಸಿದರು. ಸಂಸ್ಥೆಯ ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬಂದಿಗಳು, ಮಕ್ಕಳು, ಪಾಲಕರು, ಸ್ಥಳೀಯ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next