ಪ್ರೊವಿಡೆನ್ಸ್: ಐರ್ಲೆಂಡ್ ನಾಲ್ಕೂ ಲೀಗ್ ಪಂದ್ಯಗಳನ್ನು ಸೋತು ಟಿ20 ವನಿತಾ ವಿಶ್ವಕಪ್ “ಹೋರಾಟ’ ಮುಗಿಸಿದೆ. ನ್ಯೂಜಿಲ್ಯಾಂಡ್ ಎದುರಿನ ಶನಿವಾರದ ಕೊನೆಯ ಲೀಗ್ ಪಂದ್ಯವನ್ನು ಐರಿಷ್ ಪಡೆ 8 ವಿಕೆಟ್‌ಗಳಿಂದ ಕಳೆದುಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ 9 ವಿಕೆಟಿಗೆ ಕೇವಲ 79 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್ 7.3 ಓವರ್‌ಗಳಲ್ಲಿ 2 ವಿಕೆಟಿಗೆ 81 ರನ್ ಗಳಿಸಿ ತನ್ನ 2ನೇ ಜಯ ಸಾಧಿಸಿತು. ಐರ್ಲೆಂಡ್ ಬೌಲರ್‌ಗಳ ಮೇಲೆರಗಿದ ಸೋಫಿ ಡಿವೈನ್ 22 ಎಸೆತಗಳಲ್ಲಿ 51 ರನ್ ಸಿಡಿಸಿದರು (7 ಬೌಂಡರಿ, 3 ಸಿಕ್ಸರ್).
ಸಂಕ್ಷಿಪ್ತ ಸ್ಕೋರ್: ಐರ್ಲೆಂಡ್-20 ಓವರ್‌ಗಳಲ್ಲಿ 9 ವಿಕೆಟಿಗೆ 79 (ಲೆವಿಸ್ 39, ಶಿಲ್ಲಿಂಗ್ಟನ್ 12, ಡಿಲಾನಿ 12, ಕ್ಯಾಸ್ಪರೆಕ್ 19ಕ್ಕೆ 3, ಟಹುಹು 17ಕ್ಕೆ 2, ಕೆರ್ರ 18ಕ್ಕೆ 2). ನ್ಯೂಜಿಲ್ಯಾಂಡ್-7.3 ಓವರ್‌ಗಳಲ್ಲಿ 2 ವಿಕೆಟಿಗೆ 81 (ಡಿವೈನ್ 51, ಡಿಲಾನಿ 9ಕ್ಕೆ 1).
ಪಂದ್ಯಶ್ರೇಷ್ಠ: ಸೋಫಿ ಡಿವೈನ್.
ಏಕಕಾಲಕ್ಕೆ ನಾಲ್ವರು ಐರಿಷ್ ಆಟಗಾರ್ತಿಯರ ವಿದಾಯ!
ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಐರ್ಲೆಂಡ್ ಪಾಲಿಗೆ ತೀರಾ ನಿರಾಶಾದಾಯಕವಾಗಿತ್ತು. ಆಡಿದ ನಾಲ್ಕೂ ಪಂದ್ಯಗಳಲ್ಲಿ ಐರಿಷ್ ಪಡೆ ಸೋಲನುಭವಿಸಿ ಕೂಟದಿಂದ ನಿರ್ಗಮಿಸಿñದೆ. ಈ ಆಘಾತದ ಬೆನ್ನಲ್ಲೇ ಏಕಕಾಲದಲ್ಲಿ ತಂಡದ ನಾಲ್ವರು ಆಟಗಾರ್ತಿಯರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಘಟನೆ ಸಂಭವಿಸಿದೆ.
ಅವಳಿ ಸೋದರಿಯರಾದ ಇಸೊಬೆಲ್ ಜಾಯ್ಸ ಮತ್ತು ಸಿಸಿಲಿಯಾ ಜಾಯ್ಸ ಜತೆಗೆ ಕ್ಲೇರ್ ಶಿಲ್ಲಿಂಗ್ಟನ್ ಹಾಗೂ ಸಿಯಾರಾ ಮೆಟ್ಕಫೆ ಕ್ರಿಕೆಟಿಗೆ ಗುಡ್‌ಬೈ ಹೇಳಿದ ಆಟಗಾರ್ತಿಯರು. ಇವರಲ್ಲಿ ಶಿಲ್ಲಿಂಗ್ಟನ್ ಮತ್ತು ಮೆಟೆಫೆ ಪಂದ್ಯಾವಳಿಗೂ ಮೊದಲೇ ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಹೇಳಿಕೆಯಿತ್ತಿದ್ದರು. ತಂಡದಿಂದ ದೂರ ಸರಿದ ಎಲ್ಲ 4 ಮಂದಿ ಆಟಗಾರ್ತಿಯರಿಗೂ ಐರ್ಲೆಂಡ್ ತಂಡದ ನಾಯಕಿ ಲೌರಾ ಡಿಲಾನಿ ಕೃತಜ್ಞತೆ ಸಲ್ಲಿಸಿದ್ದಾರೆ.