Advertisement

ಡ್ಯಾರೆನ್ ಸಮ್ಮಿ ಆರೋಪ ನಿರಾಕರಿಸದ ಇರ್ಫಾನ್ ಪಠಾಣ್, ಪಾರ್ಥೀವ್

01:08 PM Jun 09, 2020 | keerthan |

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಲೀಗ್ ನಲ್ಲಿ ಭಾಗವಹಿಸಿದ್ದ ವೇಳೆ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ಯಾರೆನ್ ಸಮ್ಮಿ ನೀಡಿರುವ ಹೇಳಿಕೆಯನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಆಟಗಾರರು ನಿರಾಕರಿಸಿದ್ದಾರೆ.

Advertisement

ಡ್ಯಾರೆನ್ ಸಮ್ಮಿ ಆಡುತ್ತಿದ್ದ ವೇಳೆ ಹೈದರಾಬದ್ ತಂಡದಲ್ಲಿದ್ದ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್, ಆಲ್ ರೌಂಡರ್ ಇರ್ಫಾನ್ ಪಠಾಣ್ ಮತ್ತು ಬ್ಯಾಟ್ಸಮನ್ ಆಗಿದ್ದ ವೇಣುಗೋಪಾಲ್ ಈ ಮಾತುಗಳನ್ನು ಅಲ್ಲಗಳೆದಿದ್ದಾರೆ. ಇಂತಹ ಘಟನೆಗಳಾಗಿರುವ ಬಗ್ಗೆ ನೆನಪಿಲ್ಲ ಎಂದು ಹೇಳಿದ್ದಾರೆ.

ಅದು ಮಾತ್ರವಲ್ಲ, ಡ್ಯಾರೆನ್ ಸಮ್ಮಿ ವಿರುದ್ಧ ಅಂತಹ ಟೀಕೆಗಳನ್ನು ನಾವು ಯಾವತ್ತೂ ಕೇಳಿಲ್ಲ ಎಂದಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾಗ ನನ್ನನ್ನು ಮತ್ತು ಶ್ರೀಲಂಕಾದ ತಿಸ್ಸರಾ ಪೆರರಾ ಅವರನ್ನು ಕಲು ಎಂದು ಕರೆಯುತ್ತಿದ್ದರು. ಮೊದಲು ಅರ್ಥಗೊತ್ತಿರಲಿಲ್ಲ. ನಮ್ಮನ್ನು ಪ್ರೀತಿಯಿಂದ ಕರೆಯುತ್ತಿದ್ದರು ಎಂದು ಖುಷಿ ಪಡುತ್ತಿದ್ದರು. ಆದರೆ ಈಗ ಅದರ ಅರ್ಥ ಗೊತ್ತಾಗಿದೆ. ಐಪಿಎಲ್ ವೇಳೆ ಭಾರತದಲ್ಲೂ ವರ್ಭ ಭೇದ ನೀತಿಯ ಅನುಭವವಾಗಿತ್ತು. ಎಂದು ಡ್ಯಾರೆನ್ ಸಮ್ಮಿ ಹೇಳಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next