Advertisement

ಮಿಥಾಲಿ ರಾಜ್‌ ಶತಕದ ದಾಖಲೆ ಮುರಿದ ಆ್ಯಮಿ ಹಂಟರ್‌

10:48 PM Oct 12, 2021 | Team Udayavani |

ಹರಾರೆ: ಐರ್ಲೆಂಡಿನ ಆ್ಯಮಿ ಹಂಟರ್‌ ವನಿತಾ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅತೀ ಕಿರಿಯ ವಯಸ್ಸಿನಲ್ಲೇ ಶತಕ ಬಾರಿಸಿದ ದಾಖಲೆ ಸ್ಥಾಪಿಸಿದ್ದಾರೆ.

Advertisement

ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಮುಖಾಮುಖಿಯಲ್ಲಿ ಹಂಟರ್‌ ತಮ್ಮ 16ನೇ ಜನ್ಮದಿನದಂದೇ 127 ರನ್‌ ಬಾರಿಸಿ ಮೆರೆದರು.

ಈ ಸಂದರ್ಭದಲ್ಲಿ ಭಾರತದ ಮಿಥಾಲಿ ರಾಜ್‌ 22 ವರ್ಷಗಳ ಹಿಂದೆ ಸ್ಥಾಪಿಸಿದ ದಾಖಲೆ ಪತನಗೊಂಡಿತು. 1999ರಲ್ಲಿ ಮಿಥಾಲಿ ಐರ್ಲೆಂಡ್‌ ವಿರುದ್ಧ ಅಜೇಯ 114 ರನ್‌ ಬಾರಿಸಿ ದಾಖಲೆ ನಿರ್ಮಿಸಿದ್ದರು. ಆಗ ಮಿಥಾಲಿ ವಯಸ್ಸು 16 ವರ್ಷ, 205 ದಿನ.

ಮೊದಲ 3 ಪಂದ್ಯಗಳಲ್ಲಿ ಕ್ರಮವಾಗಿ 2, 1 ಮತ್ತು 4 ರನ್‌ ಮಾಡಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಬಳಿಕ ಆ್ಯಮಿ ವಿಶ್ವದಾಖಲೆ ಸ್ಥಾಪಿಸಿದ್ದೊಂದು ವಿಶೇಷ. 15 ವರ್ಷ ವಯಸ್ಸಿನಲ್ಲೇ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು.

ಇದನ್ನೂ ಓದಿ:ನಮ್ಮ ಕೆಲಸ ಗುರುತಿಸಿ ಜೆಡಿಎಸ್‌ಗೆ ಮತ ಹಾಕುತ್ತಾರೆ : ಮಾಜಿ ಪ್ರಧಾನಿ ದೇವೆಗೌಡ

Advertisement

ಟಿ20 ರ್‍ಯಾಂಕಿಂಗ್‌: 2ನೇ ಸ್ಥಾನಕ್ಕೆ ಕುಸಿದ ಶಫಾಲಿ
ದುಬಾೖ: ಭಾರತ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಐಸಿಸಿ ವನಿತಾ ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸ್ಮತಿ ಮಂಧನಾ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಶಫಾಲಿ ವರ್ಮ 726, ಮಂಧನಾ 709 ಅಂಕ ಹೊಂದಿದ್ದಾರೆ. ಆಸ್ಟ್ರೇಲಿಯದ ಬೆಥ್‌ ಮೂನಿ (754) ಅಗ್ರಸ್ಥಾನಕ್ಕೇರಿದ್ದಾರೆ.
ಬೌಲಿಂಗ್‌ ವಿಭಾಗದಲ್ಲಿ ಭಾರತದ ರಾಜೇಶ್ವರಿ ಗಾಯಕ್ವಾಡ್‌ 12ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯ ಎದುರಿನ ಸರಣಿಯಲ್ಲಿ ಅವರು 5 ವಿಕೆಟ್‌ ಉರುಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next