Advertisement
ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯ ಇರ್ದೆಯ ಲ್ಲಿರುವ ಬಿಎಸ್ಸೆನ್ನೆಲ್ ವಿನಿಮಯ ಕೇಂದ್ರದಲ್ಲಿ 201 ಸ್ಥಿರ ದೂರವಾಣಿ ಮತ್ತು 65 ಬ್ರಾಂಡ್‌ಬ್ಯಾಂಡ್ ಸಂಪರ್ಕ ಹೊಂದಿದ್ದು, ತಾಲೂಕಿನ ಹೆಚ್ಚು ಬಳಕೆದಾರರನ್ನು ಹೊಂದಿದ ವಿನಿಮಯ ಕೇಂದ್ರ ಎನಿಸಿದೆ. ಈ ಸಂಸ್ಥೆಯ ಸೇವೆ ಸಿಗಬೇಕಾದರೆ ಮೆಸ್ಕಾಂನಿಂದ ಗುಣಮಟ್ಟದ ತ್ರಿಫೇಸ್ ವಿದ್ಯುತ್ ಸಿಗಬೇಕು. ಇಲ್ಲಿನ ಬಳಕೆದಾರರು ಈ ಸಂಸ್ಥೆಯನ್ನು ಹೆಚ್ಚು ನೆಚ್ಚಿಕೊಂಡಿ ದ್ದಾರೆ. ಇತರ ಖಾಸಗಿ ಕಂಪೆನಿಯ ನೆಟ್‌ವರ್ಕ್ ಇಲ್ಲಿಲ್ಲ. ಬಿಎಸ್ಸೆನ್ನೆಲ್ ಕೇಂದ್ರಕ್ಕೆ ಡೀಸೆಲ್, ಸಿಬಂದಿ ಕೊರತೆ ಎಡೆಬಿಡದೆ ಕಾಡುತ್ತಲಿದೆ.
ಒರ್ವ ಲೈನ್‌ಮನ್ ಮತ್ತು ಒರ್ವ ಟೆಕ್ನೀಷಿಯನ್ ಮಾತ್ರ ಖಾಯಂ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲೈನ್‌ಮ್ಯಾನ್ ನಿರ್ವಹಣೆ ಮಾಡಲು ಹೋಗಬೇಕಾಗಿದೆ. ಟೆಕ್ನೀಷಿಯನ್ ಇತರ ಕೆಲವು ಕೇಂದ್ರಗಳಿಗೆ ತೆರಳಬೇಕಾಗುತ್ತದೆ.
ಈ ಕೇಂದ್ರದ ಜತೆ ನಿರಂತರ ಸಂಪರ್ಕ ಹೊಂದಿದ್ದು ಸಮಸ್ಯೆಗೆ ಸ್ಪಂದಿಸುವುದರಿಂದ ಬಳಕೆದಾರರಿಂದ ಸಿಬಂದಿಯ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿದೆ. ಕೇಂದ್ರದಲ್ಲಿ ರಾತ್ರಿ ಸಮಯದಲ್ಲಿ ಕಾವಲು ಗಾರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದ್ದು, ಸರಿಯಾದ ವೇತನ ಸಿಗದೇ ಇರುವುದರಿಂದ ಅವರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದರಿಂದ ರಾತ್ರಿ ಸಮಯ ಗುಡುಗು, ಮಿಂಚುಗಳು ಬಂದರೆ ಕೇಂದ್ರಕ್ಕೆ ಅಪಾಯ ಹೆಚ್ಚು. ಕೂಡಲೇ ಸಿಬಂದಿ ಯನ್ನು ನೇಮಕ ಮಾಡುವಂತೆ ಬಳಕೆದಾರರು ಒತ್ತಾಯಿಸಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಿ
ಇರ್ದೆ ದೂರವಾಣಿ ವಿನಿಮಯ ಕೇಂದ್ರಕ್ಕೆ ಗುಣಮಟ್ಟದ ವಿದ್ಯುತ್ ಬೇಕಾಗಿದೆ. ಡೀಸೆಲ್ ಪೂರೈಕೆಯಾಗದೆ ಮತ್ತು ಸಿಬಂದಿ ಕೊರತೆಯಿಂದ ಬಳಕೆದಾರರಿಗೆ ತೊಂದರೆ ಯಾಗುತ್ತದೆ. ಖಾಸಗಿ ಕಂಪೆನಿಗಳ ಟವರ್‌ಗಳು ಇಲ್ಲದೇ ಇರುವುದರಿಂದ ಹೆಚ್ಚಿನ ಗ್ರಾಹಕರು ಬಿಎಸ್ಸೆನ್ನೆಲ್ ಅನ್ನೇ ಅವಲಂಬಿಸಿದ್ದಾರೆ. ಅಧಿಕಾರಿಗಳು, ಜನಪ್ರತಿ ನಿಧಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
– ಪ್ರಕಾಶ್ ರೈ ಬೈಲಾಡಿ, ಬಿಎಸ್ಸೆನ್ನೆಲ್ ಗ್ರಾಹಕ
Related Articles
ಬೆಟ್ಟಂಪಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಕೇಂದ್ರ ಬಗ್ಗೆ ವಿಷಯ ಪ್ರಸ್ತಾವವಾಗಿತ್ತು. ಸದಸ್ಯ ವಿನೋದ್ ಕುಮಾರ್ ರೈ ಗುತ್ತು ಮಾತನಾಡಿ, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ವಿನಿಮಯ ಕೇಂದದ ಸಮಸ್ಯೆಯನ್ನು ತಿಳಿಸುವಂತೆ ಮನವಿ ಮಾಡಿದ್ದರು. ಸ್ವಲ್ಪ ಸಮಯ ಚರ್ಚೆ ನಡೆದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆಯುವುದಾಗಿ ಗ್ರಾ.ಪಂ. ನಿರ್ಣಯ ಕೈಗೊಂಡಿತ್ತು.
Advertisement
– ಮಾಧವ ನಾಯಕ್ ಕೆ.