Advertisement

ಎಲ್ಲ ಪಾಲಿಸಿದಾರರಿಗೆ ಡಿಜಿಟಲ್‌ ಪಾಲಿಸಿ ವಿತರಿಸಲು IRDAI ಸೂಚನೆ

02:01 AM Feb 16, 2021 | Team Udayavani |

ಹೊಸದಿಲ್ಲಿ : ಎಲ್ಲ ಪಾಲಿಸಿದಾರರಿಗೆ ಡಿಜಿಟಲ್‌ ಪಾಲಿಸಿಗಳನ್ನು ವಿತರಿಸುವಂತೆ ಮತ್ತು ಅವುಗಳನ್ನು ಉಪಯೋಗಿಸುವ ವಿಧಾನದ ಬಗ್ಗೆ ತಿಳಿಸಿಕೊಡುವಂತೆ ವಿಮಾ ನಿಯಂತ್ರಣಾಧಿಕಾರ ಐಆರ್‌ಡಿಎಐ ಎಲ್ಲ ವಿಮಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.

Advertisement

ಇದರಿಂದ ವೆಚ್ಚ ಉಳಿತಾಯವಾಗುವುದಲ್ಲದೆ ಕ್ಲೇಮು ವಿಲೇವಾರಿಯ ವೇಗವರ್ಧನೆ ಸಾಧ್ಯವೆಂದು ಅದು ಕಾರಣ ನೀಡಿದೆ. ಜಿಐಸಿ ಆರ್‌ಇ, ಲಾಯ್ಡ (ಇಂಡಿಯಾ) ಮತ್ತು ವಿದೇಶೀ ರಿ ಇನ್ಶೂರೆನ್ಸ್‌ ಶಾಖೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಮಾ ಸಂಸ್ಥೆಗಳಿಗೆ ಈ ಸೂಚನೆ ನೀಡಲಾಗಿದೆ.

ಈ ಕ್ರಮದಿಂದ ಪಾಲಿಸಿ ಪ್ರತಿಗಳ ನೀಡಿಕೆಯಲ್ಲಿ ವಿಳಂಬ, ವಿವಾದಗಳ ಶೀಘ್ರ ಪರಿಹಾರ ಕೂಡ ಸಾಧ್ಯ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next