Advertisement

ರೈಲ್ವೆ ಟಿಕೆಟ್‌ಗೆ ಇನ್ನು ಆಧಾರ್‌, ಪ್ಯಾನ್‌ ಕಡ್ಡಾಯ? ಮಧ್ಯವರ್ತಿಗಳ ತಡೆಗೆ ಇಲಾಖೆ ನಿರ್ಧಾರ

07:48 PM Jun 26, 2021 | Team Udayavani |

ನವದೆಹಲಿ: ರೈಲ್ವೆ ಟಿಕೆಟ್‌ ಬುಕಿಂಗ್‌ ವ್ಯವಸ್ಥೆಯಲ್ಲಿರುವ ದಲ್ಲಾಳಿ ಸಂಸ್ಕೃತಿಗೆ ಇತಿಶ್ರೀ ಹಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

Advertisement

ಹಾಗಾಗಿ, ಸದ್ಯದಲ್ಲೇ, ರೈಲ್ವೆ ಟಿಕೆಟ್‌ಗಳ ಆನ್‌ಲೈನ್‌ ಬುಕಿಂಗ್‌ ವೇಳೆ, ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ನೋಂದಾಯಿಸಲ್ಪಟ್ಟಿರುವ ಸಾರ್ವಜನಿಕರು ಆ ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಸಂದರ್ಭದಲ್ಲಿ ತಮ್ಮ ಲಾಗಿನ್‌ ವಿವರಗಳ ಜೊತೆಗೆ ಆಧಾರ್‌, ಪ್ಯಾನ್‌ ವಿವರಗಳನ್ನು ನೀಡುವುದು ಕಡ್ಡಾಯವಾಗಲಿದೆ.

ಶನಿವಾರ, ಮಾಧ್ಯಮಗಳೊಂದಿಗೆ ಮಾತನಾಡಿದ ರೈಲ್ವೆ ಸುರಕ್ಷಾ ಪಡೆಯ (ಆರ್‌ಪಿಎಫ್) ಮಹಾ ನಿರ್ದೇಶಕ ಅರುಣ್‌ ಕುಮಾರ್‌ ಈ ವಿಷಯ ತಿಳಿಸಿದ್ದಾರೆ. “ಟಿಕೆಟ್‌ ಬುಕಿಂಗ್‌ನಲ್ಲಿ ಮಧ್ಯವರ್ತಿಗಳ ಸಂಸ್ಕೃತಿಗೆ ತಡೆ ಹಾಕಲು ತೀರ್ಮಾನಿಸಿದ್ದೇವೆ. ಹಾಗಾಗಿ, ಟಿಕೆಟ್‌ ಬುಕಿಂಗ್‌ ಮಾಡುವಾಗ ಪ್ರಯಾಣಿಕರ ಆಧಾರ್‌, ಪ್ಯಾನ್‌ ಅಥವಾ ಯಾವುದೇ ಗುರುತಿನ ಚೀಟಿಯ ವಿವರಗಳನ್ನು ಪಡೆಯುವ ಪದ್ಧತಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ :ಕೇರಳದ ಇಬ್ಬರು ಆಯುರ್ವೇದ ವೈದ್ಯರಿಗೆ ಯುಎಇ ಗೋಲ್ಡನ್‌ ವೀಸಾ

Advertisement

Udayavani is now on Telegram. Click here to join our channel and stay updated with the latest news.

Next