Advertisement

ಹೊಸ ವರ್ಷಕ್ಕೆ ದುಬಾರಿಯಾಗಲಿದೆ ರೈಲು ಪ್ರಯಾಣ ; ಟಿಕೆಟ್, ಆಹಾರ ತುಟ್ಟಿ

10:04 AM Dec 27, 2019 | Team Udayavani |

ಹೊಸದಿಲ್ಲಿ: ಭಾರತೀಯ ರೈಲ್ವೇ ವರ್ಷಾಂತ್ಯದಲ್ಲಿ ರೈಲು ಪ್ರಯಾಣಿಕರಿಗೆ ಶಾಕಿಂಗ್‌ ನ್ಯೂಸ್‌ ನೀಡಿದ್ದು, ಎಲ್ಲಾ ಶ್ರೇಣಿಯ ಟಿಕೆಟ್‌ ಬೆಲೆಯನ್ನು ಸದ್ಯದಲ್ಲೇ ಹೆಚ್ಚಳ ಮಾಡುವ ಸುಳಿವನ್ನು ನೀಡಿದೆ. ರೈಲು ಪ್ರಯಾಣ ದರ ಪ್ರತಿ ಕಿ.ಮೀ.ಗೆ 5 ರಿಂದ 40 ಪೈಸೆ ದುಬಾರಿಯಾಗುವ ನಿರೀಕ್ಷೆ ಇದೆ.

Advertisement

ಇನ್ನು, ಮುಂಬಯಿ, ಚೆನ್ನೈ ಸೇರಿದಂತೆ ಹಲವು ನಗರಗಳ ಸಬ್ ಅರ್ಬನ್ ರೈಲುಗಳ ಟಿಕೆಟ್‌ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ. ಈಗಾಗಲೇ ರೈಲ್ವೆಯ ಭೋಜನ, ಉಪಹಾರ ದರವನ್ನು ಹೆಚ್ಚಳ ಮಾಡಲಾಗಿದೆ.

ಆಹಾರ ದರಗಳಲ್ಲಿಯೂ ಹೆಚ್ಚಳ
ಪ್ರಯಾಣದ ವೇಳೆ ಪ್ರಯಾಣಿಕರಿಗೆ ನೀಡಲಾಗುವ ಊಟ, ಉಪಾಹಾರಗಳ ದರವನ್ನು ಐಆರ್‌ಸಿಟಿಸಿ ಪರಿಷ್ಕರಿಸಿದ್ದು, ಸಸ್ಯಾಹಾರಿ ಉಪಾಹಾರ ದರವನ್ನು 35 ರೂ.ಗೆ ಮತ್ತು ಮಾಂಸಾಹಾರಿ ಉಪಹಾರ ಬೆಲೆಯನ್ನು 45 ರೂ.ಗೆ ನಿಗದಿ ಮಾಡಿದೆ.

ಜೊತೆಯಲ್ಲಿ ಊಟದ ದರವನ್ನು 70 ರೂ. ನಿಗದಿ ಮಾಡಿದ್ದು, ಚಿಕನ್‌ ಬಿರಿಯಾನಿ ಬೆಲೆ 100 ರೂ. ಸಸ್ಯಾಹಾರಿ ಬಿರಿಯಾನಿ 70 ರೂ.ಗೆ ಮತ್ತು ಎಗ್‌ ಬಿರಿಯಾನಿ 80 ರೂ.ಗೆ ಲಭ್ಯವಾಗಲಿದೆ. ಈ ಎಲ್ಲ ದರಗಳು ಜಿಎಸ್‌ಟಿಯನ್ನು ಒಳಗೊಂಡಿರುವ ಪರಿಷ್ಕೃತ ದರಗಳಾಗಿವೆ ಎಂದು ಇಲಾಖೆ ತಿಳಿಸಿದೆ.

ರಾಜಧಾನಿ, ಶತಾಬ್ದಿಯಲ್ಲಿ ದರ ಎಷ್ಟು?
ರಾಜಧಾನಿ, ಶತಾಬ್ದಿ, ತುರಂತೊ ರೈಲುಗಳ (ಎಸಿ) ಉಪಹಾರಗಳ ದರ ಪಟ್ಟಿ  105-140 ರೂ.ಗಳವರೆಗೆ ಇರಲಿದೆ. ತುರಂತೊ ರೈಲುಗಳ ಸ್ಲಿಪರ್‌ ಕ್ಲಾಸ್‌ ಗಳಲ್ಲಿ  ಪ್ರಯಾಣಿಕರಿಗೆ 65 ರೂ.ಗೆ ಉಪಹಾರ ಮತ್ತು 120 ರೂ.ಗೆ ಭೋಜನ ಮತ್ತು 50 ರೂ.ಗೆ ಸಾಯಂಕಾಲದ ಚಹಾ ಸಿಗಲಿದೆ.

Advertisement

ರೈಲ್ವೇ ಮಂಡಳಿಯ ನಾನಾ ವಿಭಾಗಗಳನ್ನು ವಿಲೀನಗೊಳಿಸಿ ಒಂದೇ ರೈಲ್ವೆ ನಿರ್ವಹಣೆ ವ್ಯವಸ್ಥೆಗೆ ತರುವ ಬಗ್ಗೆ ಇಲಾಖೆ ನಿರ್ಧಾರ ಮಾಡಿದ್ದು, ರೈಲ್ವೆಯ ಸಂಚಾರ, ನಿರ್ಮಾಣ, ಎಂಜಿನಿಯರಿಂಗ್‌ ವಿಭಾಗಗಳ ಬದಲಿಗೆ ಮಂಡಳಿಯು ರೈಲ್ವೆ ಕಾರ್ಯಾಚರಣೆ, ಬಿಸಿನೆಸ್‌ ಅಭಿವೃದ್ಧಿ, ಹಣಕಾಸು ಸೇರಿದಂತೆ 5 ವಲಯಗಳನ್ನಾಗಿ ಮಾರ್ಪಡು ಮಾಡಲಿದೆ. ಈ ಹಿನ್ನಲೆ ರೈಲ್ವೆ ಮಂಡಳಿಯ ಸದಸ್ಯರ ಸಂಖ್ಯೆ ಎಂಟರಿಂದ ಐದಕ್ಕೆ ಇಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next