Advertisement

ರೈಲಲ್ಲಿ ಇನ್ನು ಸಿಗಲಿದೆ ಬೇಬಿ ಫುಡ್ , ಸಿರಿಧಾನ್ಯಗಳ ಆಹಾರ

07:24 PM Nov 15, 2022 | Team Udayavani |

ನವದೆಹಲಿ: ಇನ್ನು ಮುಂದೆ ರೈಲು ಪ್ರಯಾಣದಲ್ಲಿ ಹೆಚ್ಚಿನ ರೀತಿಯಲ್ಲಿ ಸ್ಥಳೀಯ ಮತ್ತು ಪ್ರಾದೇಶಿಕ ಮಟ್ಟದ ಊಟೋಪಚಾರಗಳನ್ನು ಸವಿಯಲು ಸಾಧ್ಯವಿದೆ. ಅದಕ್ಕೆ ಪೂರಕವಾಗಿ ಇಂಡಿಯನ್‌ ರೈಲ್ವೇ ಕೆಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ನ ಆಹಾರ ಪಟ್ಟಿಯಲ್ಲಿ ಹೆಚ್ಚಿನ ವಿವರಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಿದೆ.

Advertisement

ಇದರ ಜತೆಗೆ ಮಧುಮೇಹದಿಂದ ಬಳಲುತ್ತಿರುವವರಿಗೆ, ಮಕ್ಕಳಿಗೆ ಅನುಕೂಲಕರವಾಗಿರುವ ಆಹಾರಗಳನ್ನು ಸೇರ್ಪಡೆ ಮಾಡಲಾಗುತ್ತದೆ.

ಇಷ್ಟು ಮಾತ್ರವಲ್ಲದೆ, ಹಬ್ಬಗಳ ಅವಧಿಯಲ್ಲಿ ತಯಾರಿಸಲಾಗುವ ವಿಶೇಷ ಅಡುಗೆ, ಆರೋಗ್ಯಕ್ಕೆ ಪೂರಕವಾಗಿ ಇರುವ ಸಿರಿ ಧಾನ್ಯಗಳ ಆಹಾರ ಕಾಯ್ದಿರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಪ್ರಯಾಣಿಕರಿಗೆ ಉತ್ತಮ ರೀತಿಯಲ್ಲಿ ಆಹಾರ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ರೈಲ್ವೇ ಮಂಡಳಿ ವತಿಯಿಂದ ಐಆರ್‌ಸಿಟಿಸಿಗೆ ಕಳುಹಿಸಲಾಗಿರುವ ಟಿಪ್ಪಣಿಯೊಂದರಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next