Advertisement

ಐಆರ್‌ಬಿ ಕಟ್ಟಡ ಉದ್ಘಾಟನೆ

04:48 PM Jan 17, 2021 | Adarsha |

ವಿಜಯಪುರ: ಜಿಲ್ಲೆಯ ಅರಕೇರಿ ಗ್ರಾಮದಲ್ಲಿ 9.62 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಇಂಡಿಯಾ ರಿಸರ್ವ್‌ ಬಟಾಲಿಯನ್‌ನ ಆಡಳಿತ ಕಚೇರಿಯನ್ನು ಕೇಂದ್ರ ಗೃಹ ಖಾತೆ ಸಚಿವ ಅಮಿತ್‌ ಶಾ ಶನಿವಾರ ಬೆಂಗಳೂರಿನ ಬ್ಯಾಂಕ್ವೆಟ್‌ ಹಾಲ್‌ದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್‌ ವೇದಿಕೆ ಮೂಲಕ ಉದ್ಘಾಟಿಸಿದರು.

Advertisement

ವಿಜಯಪುರ ಜಿಲ್ಲೆಯ ಅರಕೇರಿ ಗ್ರಾಮದಲ್ಲಿ ಐಆರ್‌ಬಿ ನೂತನ ಕಟ್ಟಡದ ಅಡಿಟೋರಿಯಂ ದಲ್ಲಿ ವ್ಯವಸ್ಥೆ ಮಾಡಲಾಗಿದ್ದ ಕಾರ್ಯಕ್ರಮದ ನೇರ ಪ್ರಸಾರ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ, ಬೀಜ ನಿಗಮ ಹಾಗೂ ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಶಾಸಕ ಬಸನಗೌಡ ಪಾಟೀಲ (ಯತ್ನಾಳ), ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಅನುಪಮ್‌ ಅಗರವಾಲ, ಐಆರ್‌ಬಿ ಕಮಾಂಡೆಟ್‌ ಎಸ್‌.ಡಿ. ಪಾಟೀಲ ಇದ್ದರು. ಅರಕೇರಿ ಗ್ರಾಮದಲ್ಲಿ ಕಳೆದ 2010ರಂದು

ರಿ.ಸರ್ವೇ ನಂ. 173ರ 100 ಎಕರೆ ಜಮೀನು ಮಂಜೂರು ಮಾಡಿ ಪಡೆಯ ಸ್ವಾಧೀನಕ್ಕೆ ನೀಡಲಾಗಿದೆ. ವಿಜಯಪುರ ನಗರದಿಂದ 15 ಕಿ.ಮೀ. ದೂರದಲ್ಲಿರುವ ಈ ಜಮೀನಿನಲ್ಲಿ ಈ ಆಡಳಿತ ಕಟ್ಟಡ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಶೇ. 75 ಹಾಗೂ ರಾಜ್ಯ ಸರ್ಕಾರದಿಂದ ಶೇ. 25 ಅನುದಾನ ಕಲ್ಪಿಸಲಾಗಿದ್ದು ಕಚೇರಿಯನ್ನು ಉದ್ಘಾಟಿಸಲಾಗಿದೆ.

ಇದನ್ನೂ ಓದಿ:ಇಂದು ಬೆಳಗಾವಿಯಲ್ಲಿ ಜನಸೇವಕ ಸಮಾರೋಪ

ಆಡಳಿತ ಕಚೇರಿ ವ್ಯಾಪ್ತಿಯಲ್ಲಿ 752 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅ ಧಿಕಾರಿ, ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಡೆಪ್ಯೂಟಿ ಕಮಾಂಡೆಟ್‌ ಕಚೇರಿ, ಉಗ್ರಾಣ, ಅಡಿಟೋರಿಯಂ, ಕ್ಯಾಂಟೀನ್‌, ಕಚೇರಿಯ ಪ್ರತ್ಯೇಕ ವಿಭಾಗಗಳ ಸೌಲಭ್ಯಗಳನ್ನು ಹೊಂದಿದ್ದು, ಈ ಕಟ್ಟಡ ನಿರ್ಮಾಣದಿಂದ ಇಂಡಿಯಾ ರಿಸರ್ವ್‌ ಬಟಾಲಿಯನ್‌ ವಿಜಯಪುರ ಪಡೆಗೆ ಅತೀವ ಸಂತಸದ ಕ್ಷಣವಾಗಿದೆ ಎಂದು ಬಟಾಲಿಯನ್‌ನ ಕಮಾಂಡೆಂಟ್‌ ಎಸ್‌.ಡಿ. ಪಾಟೀಲ ಹಾಗೂ ಸಹಾಯಕ ಕಮಾಂಡೆಂಟ್‌ ಶರಣಬಸು ಕೋಳಾರಿ ಹೇಳಿದರು.

Advertisement

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಪ್ರಹ್ಲಾದ ಜೋಶಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಅಶ್ವಥ್‌ನಾರಾಯಣ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಸೇರಿದಂತೆ ಪೊಲೀಸ್‌ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.

ಇದೇ ಸಂದರ್ಭದಲ್ಲಿ ಇಆರ್‌ಎಸ್‌ಎಸ್‌ (ತುರ್ತು ಪ್ರತಿಕ್ರಿಯಾ ವಾಹನ)ಗಳಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next