Advertisement

ಐಸಿಸ್‌ ವಿರುದ್ಧದ ಸಮರ ಕೊನೆ ಎಂದ ಇರಾಕ್‌ ಪಿಎಂ

08:00 AM Dec 10, 2017 | Harsha Rao |

ಬಾಗ್ಧಾದ್‌: ಇರಾಕ್‌ನಲ್ಲಿ ಉಗ್ರ ಸಂಘಟನೆ ಐಸಿಸ್‌ ವಿರುದ್ಧದ ಹೋರಾಟ ಮುಕ್ತಾಯವಾಗಿದೆ. ಹೀಗೆಂದು ಅಲ್ಲಿನ ಪ್ರಧಾನಿ ಹೈದರ್‌ ಅಲ್‌-ಅಬಾಡಿ ಶನಿವಾರ ಘೋಷಣೆ ಮಾಡಿದ್ದಾರೆ. ಸಿರಿಯಾ ಜತೆಗೆ ಹೊಂದಿಕೊಂಡಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತಾಪಡೆಗಳು ಉಗ್ರ ಸಂಘಟನೆ ಜತೆಗಿನ ಹೋರಾಟದಲ್ಲಿ ಯಶಸ್ಸುಗಳಿಸಿವೆ. ಜತೆಗೆ ವಶಪಡಿಸಿಕೊಂಡ ಸ್ಥಳಗಳನ್ನು ಕಾಯ್ದುಕೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ. ಇದರ ಜತೆಗೆ ಇರಾಕ್‌ ಸೇನೆಯ ಹಿರಿಯ ಅಧಿಕಾರಿ ಕೂಡ ಹೋರಾಟ ಮುಕ್ತಾಯಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ಬರೋಬ್ಬರಿ ಮೂರುವರೆ ವರ್ಷಗಳಿಂದ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಸೇನಾ ಪಡೆಯ ಸಹಕಾರದೊಂದಿಗೆ ಇರಾಕ್‌ ಸೇನಾ ಪಡೆ ಉಗ್ರ ಸಂಘಟನೆ ಐಸಿಸ್‌ ವಿರುದ್ಧ ಹೋರಾಟ ನಡೆಸುತ್ತಿತ್ತು. ಈ ಹೋರಾಟದ ಫ‌ಲವಾಗಿ ಉಗ್ರ ಸಂಘಟನೆಯನ್ನು ಹೊಡೆದಟ್ಟುವಲ್ಲಿ ಯಶಸ್ವಿಯಾಗಿದೆ.

Advertisement

ನವೆಂಬರ್‌ನಲ್ಲಿ ಸಿರಿಯಾ ಗಡಿ ಪ್ರದೇಶದಲ್ಲಿರುವ ಪ್ರಮುಖ ನಗರ ರಾವಾವನ್ನು ವಶಕ್ಕೆ ಪಡೆಯಲಾಗಿತ್ತು. ಉಗ್ರರ ವಿರುದ್ಧ ಜಯ ಸಾಧಿಸಿದರೂ, ಐಸಿಸ್‌ ಆಗಾಗ ಇರಾಕ್‌ನಲ್ಲಿ ಆತ್ಮಹತ್ಯಾ ಬಾಂಬ್‌ ದಾಳಿ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next