Advertisement

ಐಸಿಸ್ ಉಗ್ರರೇ ಅಫ್ಘಾನಿಸ್ತಾನ್ ಗೆ ಬಂದಿದ್ದಾರೆ: ರಷ್ಯಾ ಅಧ್ಯಕ್ಷ ಪುಟಿನ್

03:39 PM Oct 14, 2021 | Team Udayavani |

ಮಾಸ್ಕೋ : ಅಫ್ಘಾನಿಸ್ತಾನದಲ್ಲಿ ಪಾರಮ್ಯ ಮೆರೆಯುತ್ತಿರುವ ಉಗ್ರರು ಇರಾಕ್ ಮತ್ತು ಸಿರಿಯಾದಲ್ಲಿದ್ದ ಐಸಿಸ್ ನಲ್ಲಿ ಸಕ್ರೀಯವಾಗಿದ್ದವರೇ ಆಗಿದ್ದಾರೆ  ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ರಷ್ಯಾ ಪ್ರಾಬಲ್ಯದ ಕಾಮನ್ವೆಲ್ತ್ ಸ್ವತಂತ್ರ ರಾಷ್ಟ್ರಗಳೊಂದಿಗೆ(ಸಿಐಎಸ್) ಸಭೆ ನಡೆಸಿದ ಬಳಿಕ ಪುಟಿನ್ ಈ ಹೇಳಿಕೆ ನೀಡಿದ್ದಾರೆ.

ಐಸಿಸ್ ನೊಂದಿಗೆ ಸಂಯೋಜಿತವಾಗಿರುವ ಹಲವಾರು ಅಂತರಾಷ್ಟ್ರೀಯ ಭಯೋತ್ಪಾದಕ ಗುಂಪುಗಳು ಈಗ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಈ ಗುಂಪುಗಳು ಸಿಐಎಸ್ ದೇಶಗಳಿಗೆ ಭದ್ರತಾ ಬೆದರಿಕೆಗಳನ್ನು ಒಡ್ಡುತ್ತಿದ್ದು, ಅಫ್ಘಾನಿಸ್ತಾನದಿಂದ ಸಂಭವನೀಯ ಬೆದರಿಕೆಗಳನ್ನು ತಟಸ್ಥಗೊಳಿಸುವುದು ಮುಖ್ಯವಾಗಿದೆ ಎಂದು ಹೇಳಿದರು.

ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಕಾಲ  ಅಮೆರಿಕಾ ಪಡೆಗಳು ಇದ್ದದ್ದು ದುರಂತ’ಕ್ಕೆ ಕಾರಣವಾಗಿದೆ ಎಂದರು.

Advertisement

ಕೇಂದ್ರ ಏಷ್ಯಾ ಮತ್ತು ಅಫ್ಘಾನಿಸ್ತಾನದಲ್ಲಿನ ಬೆಳವಣಿಗಳನ್ನು ಸೂಕ್ಮವಾಗಿ ಗಮನಿಸುತ್ತಿದ್ದು, ಯಾವುದೇ ಬೆದರಿಕೆಗಳನ್ನು ಹಿಮ್ಮೆಟ್ಟಿಸಲು ರಷ್ಯಾ ಮತ್ತು ಸಿಐಎಸ್ ದೇಶಗಳು ಸಿದ್ಧವಾಗಿದೆ ಎಂದು ಪುಟಿನ್ ಹೇಳಿದರು.

ಈಗಾಗಲೇ ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ನ ಸೇನಾ ಪಡೆಗಳು ಆಫ್ಗಾನಿಸ್ತಾನದ ಗಡಿಭಾಗದಲ್ಲಿ ಜೊತೆಯಾಗಿ ಸಮರಾಭ್ಯಾಸ ನಡೆಸಿವೆ. ಮೂರು ರಾಷ್ಟ್ರ್ರಗಳ 2,500 ಕ್ಕೂ ಹೆಚ್ಚು ಯೋಧರು ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆ (CSTO) ನೇತೃತ್ವವನ್ನು ರಷ್ಯಾ ವಹಿಸಿದ್ದು, ತಜಕಿಸ್ತಾನ್ ಅಫ್ಘಾನಿಸ್ತಾನ್ ಜೊತೆ ಗಡಿ ಹಂಚಿಕೊಂಡಿದ್ದು ಈ ಸಮರಾಭ್ಯಾಸ ಮಹತ್ವ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next