Advertisement

ರಿಯಲ್‌ ಮೌಲ್ಯ ಭಾರೀ ಕುಸಿತ

09:55 AM Jul 30, 2018 | Team Udayavani |

ಟೆಹ್ರಾನ್‌: ಅಮೆರಿಕದ ದಿಗ್ಬಂಧನ ಮರು ಜಾರಿಗೆ ಬರುವ ಮುನ್ನವೇ ಇರಾನ್‌ ನ ಕರೆನ್ಸಿ ರಿಯಲ್‌ ನ ಮೌಲ್ಯ ಭಾರೀ ಕುಸಿತ ಕಂಡಿದೆ. ರವಿವಾರ ಅನಧಿಕೃತ ಮಾರುಕಟ್ಟೆಯಲ್ಲಿ ಡಾಲರ್‌ನ ಎದುರು ರಿಯಲ್‌ನ ಮೌಲ್ಯ ದಾಖಲೆಯ ಕನಿಷ್ಠ 1,12,000ಕ್ಕೆ ಇಳಿದಿದೆ. ಶನಿವಾರ ಈ ಮೌಲ್ಯ 98,000 ಇತ್ತು. ಸರಕಾರ ನಿಗದಿಗೊಳಿಸಿರುವ ವಿನಿಮಯ ದರ ಪ್ರತಿ ಡಾಲರ್‌ ಗೆ 44,070 ಆಗಿದೆ. ಈ ಮೌಲ್ಯ ಜ.1ರಂದು 35,186 ಆಗಿತ್ತು.

Advertisement

ಕಳೆದ ನಾಲ್ಕು ತಿಂಗಳಲ್ಲಿ ರಿಯಲ್‌ ತನ್ನ ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಮಾರ್ಚ್‌ನಲ್ಲಿ ಮೊದಲ ಬಾರಿಗೆ ಡಾಲರ್‌ ವಿರುದ್ಧ 50,000ದ ಗಡಿ ದಾಟಿತ್ತು. ಕಾಳ ಮಾರುಕಟ್ಟೆ ವರ್ತಕರನ್ನು ಮಟ್ಟಹಾಕಲು ಹೊರಟ ಇರಾನ್‌ ಸರಕಾರ ಏಪ್ರಿಲ್‌ ನಲ್ಲಿ ವಿನಿಮಯ ದರವನ್ನು 42,000ಗೆ ನಿಗದಿಗೊಳಿಸಲು ಪ್ರಯತ್ನಿಸಿತ್ತು. ಆದರೆ ಕಾಳಮಾರುಕಟ್ಟೆಯ ಅಟ್ಟಹಾಸ ಮುಂದುವರಿದಿದ್ದು, ಇರಾನ್‌ಗೆ ತಲೆನೋವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next