Advertisement

ಇರಾನಿ ಕಪ್‌: ಶೇಷ ಭಾರತ ಬೃಹತ್‌ ಮೊತ್ತ

11:34 PM Mar 02, 2023 | Team Udayavani |

ಗ್ವಾಲಿಯರ್‌: ನವದೀಪ್‌ ಸೈನಿ ಮತ್ತು ಯಶ್‌ ದುಲ್‌ ಅವರ ವೇಗದ ಅರ್ಧಶತಕದಿಂದಾಗಿ ಮಧ್ಯ ಪ್ರದೇಶ ತಂಡದೆದುರಿನ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಶೇಷ ಭಾರತ ತಂಡವು ಉತ್ತಮ ಸ್ಥಿತಿಯಲ್ಲಿದೆ.

Advertisement

ಮೊದಲ ದಿನ ಯಶಸ್ವಿ ಜೈಸ್ವಾಲ್‌ ಅವರ ದ್ವಿಶತಕ ಮತ್ತು ಅಭಿಮನ್ಯು ಈಶ್ವರನ್‌ ಅವರ ಶತಕದ ಬಳಿಕ ಯಶ್‌ ದುಲ್‌ ಅವರ ವೇಗದ ಅರ್ಧಶತಕದಿಂದಾಗಿ ಶೇಷ ಭಾರತ ತಂಡವು 484 ರನ್‌ ಗಳಿಸಿ ಆಲೌಟಾಯಿತು. ಮೊದಲ ದಿನ ಬ್ಯಾಟಿಂಗ್‌ ವೈಭವದಿಂದ ಮೆರೆದಿದ್ದ ಶೇಷ ಭಾರತ ದ್ವಿತೀಯ 107 ರನ್‌ ಗಳಿಸುವಷ್ಟರಲ್ಲಿ ಇನ್ನುಳಿದ 7 ವಿಕೆಟ್‌ ಕಳೆದುಕೊಂಡಿತ್ತು.

ಇದಕ್ಕುತ್ತರವಾಗಿ ಬ್ಯಾಟಿಂಗ್‌ ನಡೆಸಿದ ಮಧ್ಯಪ್ರದೇಶ ತಂಡವು ಸೈನಿ ಅವರ ದಾಳಿಗೆ ಆರಂಭದಲ್ಲಿಯೇ ಕುಸಿಯಿತು. 15 ರನ್‌ ಗಳಿಸುವಷ್ಟರಲ್ಲಿ ತಂಡ ಅಗ್ರ ಕ್ರಮಾಂಕದ ಮೂವರು ಆಟಗಾರರನ್ನು ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಯಶ್‌ ದುಬೆ ಮತ್ತು ಹರ್ಷ್‌ ಗಾವಿÉ ಅವರ ತಾಳ್ಮೆಯ ಆಟದಿಂದಾಗಿ ಮಧ್ಯ ಪ್ರದೇಶ ಚೇತರಿಸುವಂತಾಯಿತು. ಅವ ರಿಬ್ಬರು ಮುರಿಯದ ನಾಲ್ಕನೇ ವಿಕೆಟಿಗೆ ಈಗಾಗಲೇ 97 ರನ್‌ ಪೇರಿಸಿದ್ದರಿಂದ ಮಧ್ಯಪ್ರದೇಶ ತಂಡವು ದ್ವಿತೀಯ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 112 ರನ್‌ ಗಳಿಸಿದೆ. ಯಶ್‌ (53) ಮತ್ತು ಹರ್ಷ್‌ 47 ರನ್ನುಗಳಿಂದ ಆಡುತ್ತಿದ್ದಾರೆ.

ಗಾಯದ ಸಮಸ್ಯೆಯಿಂದ ಈ ರಣಜಿ ಋತುವನ್ನು ತಪ್ಪಿಸಿಕೊಂಡಿದ್ದ ಸೈನಿ ಅವರು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆ ಮಿಯಲ್ಲಿ ಕಠಿನ ತರಬೇತಿಯಲ್ಲಿ ಪಾಲ್ಗೊಂಡು ಈ ಪಂದ್ಯಕ್ಕಾಗಿ ಮರಳಿ ದ್ದರು. ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿದ ಅವರು 15 ರನ್ನಿಗೆ ಎರಡು ವಿಕೆಟ್‌ ಕಿತ್ತು ಮಿಂಚಿದರು.

ಸಂಕ್ಷಿಪ್ತ ಸ್ಕೋರು
ಶೇಷ ಭಾರತ 484 (ಅಭಿಮನ್ಯು ಈಶ್ವರನ್‌ 154, ಯಶಸ್ವಿ ಜೈಸ್ವಾಲ್‌ 213, ಯಶ್‌ ದುಲ್‌ 55, ಆವೇಶ್‌ ಖಾನ್‌ 72ಕ್ಕೆ 4); ಮಧ್ಯ ಪ್ರದೇಶ ಮೊದಲ ಇನ್ನಿಂಗ್ಸ್‌ 3 ವಿಕೆಟಿಗೆ 112 (ಯಶ್‌ ದುಬೆ 53 ಬ್ಯಾಟಿಂಗ್‌, ಹರ್ಷ್‌ ಗಾವಿÉ 47 ಬ್ಯಾಟಿಂಗ್‌, ನವದೀಪ್‌ ಸೈನಿ 15ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next