ಟೆಹರಾನ್: ಇರಾನ್‌ನಲ್ಲಿ ಹಿಜಾಬ್ ವಿರುದ್ಧ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ತನ್ನ ತಲೆಗೆ ಧರಿಸಿದ್ದ ಸ್ಕಾರ್ಫ್ ಕಿತ್ತೆಸೆದು ಬೆಂಬಲ ವ್ಯಕ್ತಪಡಿಸಿದ್ದ ಹದೀಸ್ ನದಾಫಿ ಎಂಬ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕೆಲವು ದಿನಗಳ ಹಿಂದೆ, ಹಿಜಾಬ್ ಸರಿಯಾಗಿ ಧರಿಸದೇ ಇರುವ ಕಾರಣಕ್ಕೆ ಮೆಹ್ಸಾ ಅಮಿನಿ ಎಂಬ ಯುವತಿಯನ್ನು ಇರಾನ್ ಪೊಲೀಸರು ಬಂಧಿಸಿದ್ದರು.
ಪೊಲೀಸರ ವಶದಲ್ಲಿ ಆಕೆ ಮೃತಪಟ್ಟಿದ್ದಳು. ಪೊಲೀಸರ ನೈತಿಕಗಿರಿ ಖಂಡಿಸಿ ಇರಾನ್, ಸಿರಿಯಾ, ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇದೇ ರೀತಿ ಟೆಹರಾನ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಸ್ಕಾರ್ಫ್ ಕಿತ್ತೆಸೆದ ಹದೀಸ್ ನದಾಫಿ ಪೋಟೋ ಎಲ್ಲೆಡೆ ವೈರಲ್ ಆಗಿತ್ತು.
ದುಷ್ಕರ್ಮಿಗಳು ಮಂಗಳವಾರ ಹದೀಸ್ ಮೇಲೆ ಆರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಕೂದಲು ಕತ್ತರಿಸಿಕೊಂಡ ಗಾಯಕಿ: ಇನ್ನೊಂದೆಡೆ, ಹಿಜಾಬ್ ವಿರುದ್ಧದ ಪ್ರತಿ ಭಟನೆ ಬೆಂಬ ಲಿಸಿ ಟರ್ಕಿ ದೇಶದ ಗಾಯಕಿ ಮೆಲೆಕ್ ವೇದಿಕೆಯಲ್ಲೇ ಕೂದಲು ಕತ್ತರಿಸಿಕೊಂಡಿದ್ದಾರೆ. “ಮಹಿಳೆಯರು ತಮ್ಮದೇ ಸ್ವಾತಂತ್ರ್ಯ ಹೊಂದಿ ದ್ದಾರೆ. ಅವರ ಮೇಲೆ ಹೇರಿಕೆ ಸಲ್ಲದು,’ ಎಂದು ಗಾಯಕಿ ಪ್ರತಿಪಾದಿಸಿದ್ದಾರೆ.
ಅನಗತ್ಯ ಬಲಪ್ರಯೋಗ ಬೇಡ: ಹಿಜಾಬ್ ವಿರುದ್ಧ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿ ಭಟನೆಯಲ್ಲಿ ಅನಗತ್ಯ ಬಲಪ್ರಯೋಗ ಬೇಡ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯ ದರ್ಶಿ ಆಂಟೊನಿಯೊ ಗುಟೆರಸ್ ಇರಾನ್ ಸರಕಾರಕ್ಕೆ ಸೂಚಿಸಿದ್ದಾರೆ. ಮೆಹ್ಸಾ ಅಮಿನಿ ಸಾವಿನ ಕುರಿತು ತ್ವರಿತ, ನ್ಯಾಯ ಯುತ ಮತ್ತು ನಿಷ್ಪಕ್ಷಪಾತ ತನಿಖೆಗೆ ಅವರು ಆಗ್ರಹಿಸಿದ್ದಾರೆ.