Advertisement

ಇರಾನ್‌ ಸುಲೈಮನಿ ಅಂತ್ಯಕ್ರಿಯೆ ವೇಳೆ ಕಾಲ್ತುಳಿತ ಮೃತರ ಸಂಖ್ಯೆ 40ಕ್ಕೆ ಏರಿಕೆ

09:56 AM Jan 08, 2020 | sudhir |

ಟೆಹರಾನ್‌: ಅಮೆರಿಕದಿಂದ ಕೊಲ್ಲಲ್ಪಟ್ಟ ಇರಾನ್‌ನ ಹಿರಿಯ ಸೇನಾಧಿಕಾರಿ ಜ.ಖಾಸೀಮ್‌ ಸುಲೈಮನಿ ಅಂತ್ಯಕ್ರಿಯೆ ವೇಳೆ ಕಾಲ್ತುಳಿತ ಉಂಟಾಗಿ ಕನಿಷ್ಠ 40 ಮಂದಿ ಅಸುನೀಗಿ, ಹಲವರು ಗಾಯಗೊಂಡಿದ್ದಾರೆ.

Advertisement

ಸುಲೈಮನಿಯ ಹುಟ್ಟೂರು ಕೆರ್ಮಾನಿಯಲ್ಲಿ ಅಂತ್ಯಕ್ರಿಯೆಗಾಗಿ ಲಕ್ಷಾಂತರ ಮಂದಿ ನೆರೆದಿದ್ದ ಕಾರಣ ಈ ದುರ್ಘ‌ಟನೆ ಸಂಭವಿಸಿದೆ. ಇರಾನ್‌ನ ತುರ್ತು ವೈದ್ಯಕೀಯ ಸೇವಾ ಮುಖ್ಯಸ್ಥ ಪಿಹೋìಸ್ಸಿನ್‌ ಕೊಲಿವಾಂಡ್‌ ಕೂಡ ಸರ್ಕಾರಿ ವಾಹಿನಿ ಜತೆಗೆ ಮಾತನಾಡಿ, ದುರಂತ ನಡೆದದ್ದು ಹೌದು ಎಂದು ಖಚಿತಡಿಸಿದ್ದಾರೆ.
“ದುರದೃಷ್ಟವಶಾತ್‌ ಈ ಘಟನೆ ನಡೆದಿದೆ.

ಹಲವರು ಗಾಯಗೊಂಡಿದ್ದಾರೆ ಮತ್ತು ಕೆಲವರು ಮೃತಪಟ್ಟಿದ್ದಾರೆ’ ಎಂದು ಹೇಳಿದ್ದಾರೆ.

ಸೋಮವಾರ ನಡೆದಿದ್ದ ಸುಲೈಮನಿ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಟೆಹರಾನ್‌ನಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು.

ಅಂತ್ಯಸಂಸ್ಕಾರಕ್ಕೆ ಸೇರಿರುವ ಜನರ ಸಂಖ್ಯೆ ಇರಾನ್‌ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಎಂದು ಹೇಳಲಾಗುತ್ತಿದೆ. ಟೆಹರಾನ್‌, ಖೂಮ್‌, ಮಶಾÏಡ್‌ ಮತ್ತು ಅಹ್ವಾಝ್ ನಗರಗಳಲ್ಲೂ ಅಷ್ಟೇ ಸಂಖ್ಯೆಯ ಜನರು ಸೇರಿ, ಸೇನಾಧಿಕಾರಿಗೆ ಗೌರವ ಅರ್ಪಿಸಿದ್ದಾರೆ ಮತ್ತು ಅಮೆರಿಕದ ವಿರುದ್ಧ ಘೋಷಣೆ ಕೂಗಿದ್ದಾರೆ.

Advertisement

ಅಮೆರಿಕದ ಸೈನಿಕರು ಉಗ್ರಗಾಮಿಗಳು:
ಸುಲೈಮನಿಯನ್ನು ಹತ್ಯೆ ಮಾಡಿರುವ ಅಮೆರಿಕದ ಸೈನಿಕರು “ಭಯೋತ್ಪಾದಕರು’ ಎಂದು ಇರಾನ್‌ನ ಸಂಸತ್‌ನಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಅಮೆರಿಕದ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಪೆಂಟಗನ್‌ ಮತ್ತು ಅದಕ್ಕೆ ಸಂಯೋಜನೆಗೊಂಡಿರುವ ಎಲ್ಲಾ ಸಂಸ್ಥೆಗಳಲ್ಲಿನ ಉದ್ಯೋಗಿಗಳು, ಏಜೆಂಟರು ಮತ್ತು ಕಮಾಂಡರ್‌ಗಳು “ಭಯೋತ್ಪಾದಕರು’ ಎಂದು ನಿರ್ಣಯ ಅಂಗೀಕರಿಸಲಾಗಿದೆ.

ದೂರ ಸರಿದ ಪೆಂಟಗನ್‌:
ಇರಾನ್‌ನ ಸಾಂಸ್ಕೃತಿಕ ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ಅಮೆರಿಕದ ಸೇನೆ ದಾಳಿ ನಡೆಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯಿಂದ ಅಮೆರಿಕದ ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿ ಪೆಂಟಗನ್‌ ದೂರ ಸರಿದಿದೆ. ಏಕೆಂದರೆ ಅಂತಾರಾಷ್ಟ್ರೀಯವಾಗಿ ಇಂಥ ಕ್ರಮಗಳನ್ನು ನಡೆಸುವುದಕ್ಕೆ ವಿರೋಧ ಇದೆ ಮತ್ತು ಇದೊಂದು ಯುದ್ಧಾಪರಾಧಕ್ಕೆ ಸಮನಾಗಿರುವ ಅಂಶ ಎಂದು ಪೆಂಟಗನ್‌ನ ಹಿರಿಯ ಸೇನಾಧಿಕಾರಿ ಜ.ಮಾರ್ಕ್‌ ಮಿಲ್ಲೆ ಹೇಳಿದ್ದಾರೆ.

ಇನ್ನೂ ನಿರ್ಧಾರವಿಲ್ಲ: ಇರಾನ್‌ನಲ್ಲಿ ಇರುವ 5 ಸಾವಿರ ಅಮೆರಿಕ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ರಕ್ಷಣಾ ಸಚಿವ ಮಾರ್ಕ್‌ ಎಸ್ಪರ್‌ ಹೇಳಿದ್ದಾರೆ.

ಸುಧಾರಿಸಿದ ಸೂಚ್ಯಂಕ:
ಅಮೆರಿಕ- ಇರಾನ್‌ ನಡುವಿನ ಉದ್ವಿಗ್ನ ಸ್ಥಿತಿಯಿಂದ ಸೋಮವಾರ 788 ಅಂಕಗಳಷ್ಟು ಕುಸಿದಿದ್ದ ಮುಂಬೈ ಷೇರುಪೇಟೆ ಸೂಚ್ಯಂಕ ಮಂಗಳವಾರ ಚೇತರಿಸಿಕೊಂಡು, 192.84 ಅಂಕಗಳಷ್ಟು ಏರಿಕೆ ಕಂಡಿದೆ. ಸೂಚ್ಯಂಕ ಒಂದು ಹಂತದಲ್ಲಿ 553.51ರ ವರೆಗೆ ಏರಿಕೆಯಾಯಿತು. ದಿನದ ಅಂತ್ಯಕ್ಕೆ 40,869ರಲ್ಲಿ ಮುಕ್ತಾಯವಾಯಿತು. ನಿಫ್ಟಿ ಸೂಚ್ಯಂಕ 59.90 ಅಂಕ ಏರಿಕೆ ಕಂಡು 12,052.95ರಲ್ಲಿ ಮುಕ್ತಾಯವಾಯಿತು. ಶಾಂಘೈ, ಹಾಂಕಾಂಗ್‌, ಟೋಕಿಯೋ, ಸಿಯೋಲ್‌ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿಯೂ ಕೂಡ ಸೋಮವಾರಕ್ಕೆ ಹೋಲಿಕೆ ಮಾಡಿದರೆ ಮಂಗಳವಾರ ವಹಿವಾಟು ತೃಪ್ತಿಕರವಾಗಿತ್ತು. ಇದರ ಹೊರತಾಗಿಯೂ ಹೂಡಿಕೆದಾರರ ಆತಂಕ ಮುಂದುವರಿದಿದೆ.

ಚಿನ್ನ ದರದಲ್ಲಿ ಅಲ್ಪ ಇಳಿಕೆ
ನವದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಮಂಗಳವಾರ 10 ಗ್ರಾಂ ಚಿನ್ನಕ್ಕೆ 420 ರೂ. ಇಳಿಕೆಯಾಗಿದೆ. ಹೀಗಾಗಿ ಅದು 41,210 ರೂ.ಗೆ ತಗ್ಗಿದೆ. ಪ್ರತಿ ಕೆಜಿ ಬೆಳ್ಳಿಯ ದರ ಕೂಡ 830 ರೂ.ಗಳಷ್ಟು ಕಡಿಮೆಯಾಗಿದೆ ಸೋಮವಾರದ ದರ 49,630 ರೂ.ಗಳಿಂದ 48,600 ರೂ.ಗಳಿಗೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಪ್ರತಿ ಔನ್ಸ್‌ ಚಿನ್ನಕ್ಕೆ 1,568 ಡಾಲರ್‌ಗೆ ಇಳಿಕೆಯಾಗಿದೆ. ಇದೇ ವೇಳೆ, ಕಚ್ಚಾ ತೈಲ ಬ್ರೆಂಟ್‌ಗೆ ಸೋಮವಾರ ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ಗಳಷ್ಟು ಇತ್ತು. ಅದು ಮಂಗಳವಾರದ ವೇಳೆಗೆ 68.73 ಡಾಲರ್‌ಗೆ ಇಳಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next