ಟೆಹ್ರಾನ್: ಇರಾನ್ ನ ಸುಧಾರಣಾವಾದಿ ಅಭ್ಯರ್ಥಿ ಮಸೌದ್ ಪೆಝೆಶ್ಕಿಯಾನ್ ಶನಿವಾರ (ಜುಲೈ 06) ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಆಲ್ಟ್ರಾ ಕನ್ಸರ್ವೇಟಿವ್ ನ ಸಯೀದ್ ಜಲೀಲಿ ಅವರನ್ನು ಸೋಲಿಸಿ ಗೆಲುವು ಸಾಧಿಸಿರುವುದಾಗಿ ಇರಾನ್ ನ ಆಂತರಿಕ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:Pratapgarh; ಪಂಚಾಯತ್ ನಲ್ಲಿ ಪರಿಹಾರ ಸಿಗದ ಪ್ರಕರಣ ಬೇಧಿಸಿದ ಎಮ್ಮೆ! ವಿಚಿತ್ರವಾದರೂ ಸತ್ಯ
ಅಧ್ಯಕ್ಷೀಯ ಚುನಾವಣೆಯಲ್ಲಿ 30 ಲಕ್ಷ ಮತದಾನವಾಗಿದ್ದು, ಪೆಝೆಶ್ಕಿಯಾನ್ 16 ಲಕ್ಷಕ್ಕೂ ಅಧಿಕ ಮತ ಪಡೆದು ಜಯಗಳಿಸಿದ್ದಾರೆ. ಸಯೀದ್ ಜಲೀಲಿ 13 ಲಕ್ಷಕ್ಕೂ ಅಧಿಕ ಮತ ಪಡೆದು ಪರಾಜಯಗೊಂಡಿರುವುದಾಗಿ ಚುನಾವಣಾಧಿಕಾರಿ ಮೋಹ್ಸೆನ್ ಇಸ್ಲಾಮಿ ತಿಳಿಸಿದ್ದಾರೆ.
ಶೇ.49.8ರಷ್ಟು ಮತದಾನವಾಗಿತ್ತು. ಸುಮಾರು 6,00,000 ಲಕ್ಷಕ್ಕೂ ಅಧಿಕ ಮತಗಳು ಅಸಿಂಧುವಾಗಿರುವುದಾಗಿ ವರದಿ ವಿವರಿಸಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪೆಝೆಶ್ಕಿಯಾನ್ ತನ್ನ ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸಿದ್ದು, ಪ್ರೀತಿಯಿಂದ ದೇಶಕ್ಕಾಗಿ ದುಡಿಯುವುದಾಗಿ ತಿಳಿಸಿದ್ದಾರೆ.
ನೆರೆಹೊರೆಯ ಎಲ್ಲಾ ದೇಶಗಳ ಜತೆಗಿನ ಸ್ನೇಹ ಮುಂದುವರಿಸುವುದಾಗಿ ತಿಳಿಸಿರುವ ಪೆಝೆಶ್ಕಿಯಾನ್, ದೇಶದ ಅಭಿವೃದ್ಧಿಗೆ ನಾವು ಎಲ್ಲರ ಸ್ನೇಹವನ್ನು ಗಳಿಸಬೇಕಾಗಿದೆ ಎಂದು ಟೆಲಿವಿಷನ್ ಭಾಷಣದಲ್ಲಿ ಹೇಳಿದ್ದಾರೆ.
ಇರಾನ್ ನ ಆಲ್ಟ್ರಾಕನ್ಸರ್ವೇಟಿವ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ದೇಶದಲ್ಲಿ ಚುನಾವಣೆ ನಡೆಸಲಾಗಿತ್ತು. ಈ ಚುನಾವಣೆಯಲ್ಲಿ ಐತಿಹಾಸಿಕ ಕಡಿಮೆ ಪ್ರಮಾಣದ ಮತದಾನವಾಗಿರುವುದಕ್ಕೆ ಸಾಕ್ಷಿಯಾಗಿತ್ತು.