Advertisement

ಇರಾನ್ ನಲ್ಲಿ ಬೃಹತ್ ಹೊಸ ತೈಲ ನಿಕ್ಷೇಪ ಪತ್ತೆ

09:51 AM Nov 12, 2019 | Team Udayavani |

ಟೆಹರಾನ್‌: ಹೊಸ ತೈಲ ನಿಕ್ಷೇಪ ಪತ್ತೆ ಮಾಡಿರುವ ಬಗ್ಗೆ ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ ಘೋಷಣೆ ಮಾಡಿದ್ದಾರೆ. ದೇಶದ ಈಶಾನ್ಯ ಭಾಗದಲ್ಲಿರುವ ಖುಝೆಸ್ತಾನ್‌ ಪ್ರಾಂತ್ಯ ದಲ್ಲಿ 2,400 ಚದರ ಕಿಮೀ ವ್ಯಾಪ್ತಿಯಲ್ಲಿ ಈ ನಿಕ್ಷೇಪ ಹರಡಿಕೊಂಡಿದೆ. ಪ್ರತಿ ವರ್ಷ 53 ಬಿಲಿಯನ್‌ ಬ್ಯಾರಲ್‌ ಕಚ್ಚಾ ತೈಲ ಅದರಿಂದ ಹೊರ ತೆಗೆಯಬಹುದು ಎಂದು ರೊಹಾನಿ ಹೇಳಿದ್ದಾರೆ.

Advertisement

ಯುರೇನಿಯಂ ಅಭಿವೃದ್ಧಿ ನಡೆಸುತ್ತಿದೆ ಎಂಬ ಕಾರಣಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರ್ಥಿಕ ದಿಗ್ಬಂಧನ ಹೇರಿರುವ ಬೆನ್ನಲ್ಲೇ ಇರಾನ್‌ ಸರಕಾರ ಹೊಸ ನಿಕ್ಷೇಪದ ಘೋಷಣೆ ಮಾಡಿದೆ. ‘ಅಮೆರಿಕ ಸರಕಾರ ನಮ್ಮ ಮೇಲೆ ದಿಗ್ಬಂಧನ ಹೇರಿದ ಅವಧಿಯಲ್ಲಿಯೇ ನಮ್ಮ ದೇಶದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ಹೊಸ ತೈಲ ನಿಕ್ಷೇಪ ಕಂಡು ಹಿಡಿದಿದ್ದಾರೆ. ಅದನ್ನು ಶ್ವೇತಭವನ ಗಮನಿಸಲಿ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next