ಟೆಹ್ರಾನ್: ಅಮೆರಿಕವು ಹೇರಿದ ನಿಷೇಧಕ್ಕೆ ಪ್ರತೀಕಾರವಾಗಿ ಇರಾನ್ ತನ್ನ ಯುರೇನಿಯಂ ಸಂಗ್ರಹವನ್ನು ನಿಗದಿತ 300 ಕಿಲೋಗಿಂತ ಹೆಚ್ಚಳ ಮಾಡಿರುವುದಾಗಿ ಘೋಷಿಸಿದೆ. ಈ ಬಗ್ಗೆ ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್ ಜವಾದ್ ಜರೀಫ್ ಹೇಳಿಕೆ ನೀಡಿದ್ದು, ಇದನ್ನು ವಿಶ್ವಸಂಸ್ಥೆ ಕೂಡ ಖಚಿತಪಡಿಸಿದೆ. ಕಳೆದ ವರ್ಷ ಇರಾನ್‌ನೊಂದಿಗೆ ಅಣ್ವಸ್ತ್ರ ಒಪ್ಪಂದವನ್ನು ಅಮೆರಿಕ ಮುರಿದುಕೊಂಡಿತ್ತು. ಅಷ್ಟೇ ಅಲ್ಲ, ಅಂದಿನಿಂದಲೂ ಹಲವು ನಿಷೇಧಗಳನ್ನು ಇರಾನ್ ವಿರುದ್ಧ ಅಮೆರಿಕ ಹೇರಿತ್ತು. ಇದಕ್ಕೆ ಇರಾನ್ ಬಗ್ಗದಿದ್ದಾಗ ಕೆಲವೇ ದಿನಗಳ ಹಿಂದೆ ಮತ್ತಷ್ಟು ನಿಷೇಧಗಳನ್ನು ಅಮೆರಿಕ ಹೇರಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್ ಈ ಕ್ರಮ ತೆಗೆದುಕೊಂಡಿದೆ.
300 ಕಿಲೋವರೆಗೆ ಯುರೇನಿಯಂ ಅನ್ನು ಕೇವಲ ಅಣುವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ಬಳಸಲಾಗುತ್ತದೆ. ಆದರೆ, 1050 ಕಿಲೋವನ್ನು ಅಣುಬಾಂಬ್ ತಯಾರಿಕೆಗೆ ಬಳಸಲಾಗುತ್ತದೆ.
Advertisement