Advertisement

ಉಕ್ರೇನ್ ನಾಗರಿಕ ವಿಮಾನವನ್ನು ಉರುಳಿಸಿದ್ದು ನಾವೇ; ತಪ್ಪೊಪ್ಪಿಕೊಂಡ ಇರಾನ್

10:03 AM Jan 12, 2020 | Team Udayavani |

ಟೆಹರಾನ್: ಇತ್ತೀಚೆಗಷ್ಟೇ ಸುಮಾರು 176 ಜನರ ಸಾವಿಗೆ ಕಾರಣವಾಗಿದ್ದ ಉಕ್ರೇನ್ ವಿಮಾನ ಪತನವನ್ನು ಮಾಡಿಸಿದ್ದು ನಾವೇ ಎಂದು ಇರಾನ್ ತಪ್ಪೊಪ್ಪಿಕೊಂಡಿದೆ.

Advertisement

ಆದರೆ  ವಿಮಾನ ಹೊಡೆದುರುಳಿಸಿದ್ದು ಉದ್ದೇಶ ಪೂರ್ವಕವಾಗಿ ಅಲ್ಲ. ನಮ್ಮ ಸೇನಾಪಡೆಗಳ ತಪ್ಪು ಗ್ರಹಿಕೆಯಿಂದಾಗಿರುವ ಘಟನೆ ಎಂದು ಇರಾನ್ ಒಪ್ಪಿಕೊಂಡಿದೆ.

ಇರಾನ್ ರಾಜಧಾನಿ ಟೆಹರಾನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಬೋಯಿಂಗ್ 737  ಸರಣಿಯ ಈ ವಿಮಾನ ಪತನವಾಗಿತ್ತು. ಉಕ್ರೇನ್ ಗೆ ಸೇರಿದ್ದ ಈ ವಿಮಾನದಲ್ಲಿದ್ದು ಎಲ್ಲರೂ ಅಸುನೀಗಿದ್ದರು.

ಆದರೆ ಈ ಮೊದಲು ತಾಂತ್ರಿಕ ದೋಷದಿಂದಾಗಿ ವಿಮಾನ ಪತನವಾಗಿದೆ ಎಂದು ಹೇಳಲಾಗಿತ್ತು. ಅಮೇರಿಕಾದ ಮೇಲೆಯೂ ಆರೋಪಿಸಲಾಗಿತ್ತು. ಆದರೆ ತಪ್ಪು ಗ್ರಹಿಕೆಯಿಂದ ಇರಾನ್ ಈ ವಿಮಾನ ಹೊಡೆದುರುಳಿಸಿದೆ ಎಂದು ಅಮೇರಿಕಾ ಹೇಳಿತ್ತು. ಆದರೆ ಮೊದಲು ಇದನ್ನು ತಿರಸ್ಕರಿಸಿದ್ದ ಇರಾನ್, ಸೇನಾಪಡೆಗಳ ತಪ್ಪು ಗ್ರಹಿಕೆಯಿಂದಾಗಿ ತಾವೇ ನಾಗರಿಕ ವಿಮಾನವನ್ನು ಹೊಡೆದುರುಳಿಸಿದೆ ಎಂದು ಒಪ್ಪಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next