ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ಇರಕಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮ ದೇವತೆಯಾದ ಮಾರಮ್ಮ ದೇವಿಯ ಪ್ರಾರಂಭತ್ಸೋವ ಮಹೋತ್ಸವ ಹಾಗೂ ಶಿರ ಕಳಸ ಸ್ಥಾಪನೆ ಮಾಡಲಾಯಿತು.ಈ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಮಾರಮ್ಮ ದೇವಿಯ ದೇವಾಲಯದಲ್ಲಿ ಮೂರು ದಿನಗಳ ಕಾಲ ವಿಶೇಷ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು.
ಮೊದಲನೆಯ ವಾರ ಭಾನುವಾರ ಪುಣ್ಯಾಹ ನಾಂದಿ, ಗಣಪತಿ ಪೂಜೆ,ಮಂಡಲಾರಾಧನೆ,ಕಳಸ ಸ್ಥಾಪನೆ ಮತ್ತು ರಾಕ್ಷೋಘ್ನ ಅಘೋರಶಾಸ್ತ್ರಹೋಮ, ಪುಣ್ಯಾಹುತಿ, ದಿಗ್ ಬಲಿ,ಮಹಾ ಮಂಗಳಾರತಿ, ಆನಿವಾಸಗಳು ಇತ್ಯಾದಿ ಪೂಜಾ ವಿಧಾನಗಳು ನಡೆದವು.
ಎರಡನೆ ದಿನ ಸೋಮವಾರದಂದು ಗಂಗೆ ಪೂಜೆ, ಗೋವು ಪೂಜೆ, ಪ್ರವೇಶ ಕಳಶರಾಧನೆ, ಗಣಪತಿ ಹೋಮ , ಕಲಾಹೋಮ, ದುರ್ಗ ಹೋಮ,ಲಕ್ಷ್ಮೀ ಹೋಮ ಪುಣ್ಯಾಹುತಿ,ನೇತ್ರೊನಿಲ್ಮನ,ವಿಮಾನ ಗೋಪುರ ಪ್ರತಿಷ್ಟಾಪನೆ, ಕುಂಭಾಭಿಷೇಕ, ಪಂಚಾಮೃತ ಆಭಿಷೇಕ,
ಆಲಂಕಾರ ಮಹಾ ಮಂಗಳಾರತಿ,ಗ್ರಾಮಸ್ಥರಿಂದ ಮಾರಮ್ಮ ದೇವಿಗೆ ಆರತಿ ಕಾರ್ಯಕ್ರಮವಿರುತ್ತದೆ. ಮೂರನೇ ದಿನ ಮಂಗಳವಾರದಂದು ದೇವಿಗೆ ಪಂಚಾಮೃತ ಅಭಿಷೇಕ,ಕುಂಕುಮಾರ್ಚನೆ, ಆಲಂಕಾರ,ಮಂಗಳಾರತಿ,ಗ್ರಾಮಸ್ಥರಿಂದ ಮಾರಮ್ಮ ದೇವಿಗೆ ಆರತಿ,ಅನ್ನಸಂತರ್ಪಣೆ ಪ್ರಸಾದ ವಿನಿಯೋಗವಿರುತ್ತದೆ.
ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮದ ಕುಮಾರಸ್ವಾಮಿ ಮಾತನಾಡಿ ಸುಮಾರು 400 ಜನ ವಾಸವಿರುವ ಪುಟ್ಟ ಗ್ರಾಮದಲ್ಲಿರುವ ಪುರಾತನ ಕಾಲದ ಮಾರಮ್ಮ ದೇವಿಯ ದೇವಾಲಯದ ಇತಿಹಾಸ ಮತ್ತು ಐತಿಹ್ಯವನ್ನು ವಿವರಿಸಿದರು.
ಪ್ರಧಾನ ಆರ್ಚಕ ಗಿರೀಶ್ ಮಾತನಾಡಿ ಗ್ರಾಮಸ್ಥರ ನೆರವಿನಿಂದ ಯಾವುದೇ ರೀತಿಯ ತೊಂದರೆಗಳಿಲ್ಲದೆ ಮಾರಮ್ಮ ದೇವಿಯ ಎಲ್ಲಾ ಪೂಜಾ ಕಾರ್ಯಕ್ರಮಗಳು ನಡೆದವು. ಈ ದೇವಾಲಯ ದೊಡ್ಟದಾಗಿದ್ದು ಸಂಪೂರ್ಣ ಕಲ್ಲಿನಿಂದ ನಿರ್ಮಾಣವಾಗಿದೆ ಎಂದರು.
ಗ್ರಾಮಸ್ಥರ ರಕ್ಷಣೆಗೆ ಈ ತಾಯಿ ಇಲ್ಲಿ ನೆಲೆಸಿದ್ದಾಳೆ. ಮಾರಮ್ಮ ದೇವಿ ಎಲ್ಲಾ ಜನರಿಗೆ ಆರೋಗ್ಯಕೊಟ್ಟು ಮಾಹಾಮಾರಿ ಕೊರೊನಾ ರೋಗವು ನಿವಾರಣೆಯಾಗಲಿ .ಹೆಚ್ಚಿನ ಭಕ್ತರು ಇರಕಸಂದ್ರ ಗ್ರಾಮಕ್ಕೆ ಭೇಟಿ ನೀಡಿ ದರ್ಶನ ಪಡೆಯಲು ತಿಳಿಸಿದರು.ಆರ್ಚಕರಾದ ಗಿರೀಶ್, ಪ್ರಶಾಂತ್ ಶರ್ಮಾ,ದತ್ತಾತ್ರೇಯ ಹಾಜರಿದ್ದರು.
ಈ ಸಂದರ್ಭದಲ್ಲಿ ಲಗ್ಗೆರೆ ಕುಮಾರ್, ಪೋಲೀಸ್ ಇಲಾಖೆಯ ನಿವೃತ್ತಿ ನಾಗರಾಜು,ಉಮೇಶ್, ಶಿವಣ್ಣ, ಪ್ರಕಾಶ್, ಕುಮಾರ್, ರಾಮಕೃಷ್ಣಪ್ಪ, ರಾಮಸ್ವಾಮಿ, ರಾಜಣ್ಣ, ಗ್ರಾಪಂ ಸದಸ್ಯ ಕುಮಾರ್, ಮಾಜಿ ಗ್ರಾಪಂ ಸದಸ್ಯ ಮಧು, ಗ್ರಾಪಂ ಮಾಜಿ ಸದಸ್ಯ ಅಶ್ವಥ್ ಆಟೋ ಪೃಥ್ವಿ, ವಿದ್ಯಾಶಂಕರ್, ರಾಜಣ್ಣ.ಸಿ,ರುದ್ರೇಶ್, ಮತ್ತಿತರರು ಹಾಜರಿದ್ದರು