Advertisement
ಕೂಲಿ ಕಾರ್ಮಿಕ ಹುಸೈನ್ – ಜೀನತ್ ದಂಪತಿಯ ಪುತ್ರ ಸ್ಥಳೀಯ ಸರಕಾರಿ ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿ ಇರ್ಫಾನ್ (11) ಮೃತ ಬಾಲಕ.
ಶನಿವಾರ ಮಧ್ಯಾಹ್ನ ಆತ ಶಾಲೆಯಿಂದ ಬಂದ ಬಳಿಕ ಮನೆಮಂದಿ ಔಷಧಕ್ಕಾಗಿ ತೆರಳಿದ್ದರು. ಈ ಸಂದರ್ಭ ನೆರೆಯ ಇತರ ಮೂವರು ಜತೆಗಾರರೊಂದಿಗೆ ಕೋರೆಯ ಬಳಿ ಹೋಗಿದ್ದರು ಎನ್ನಲಾಗಿದೆ. ಘಟನೆಯ ಬಳಿಕ ಜತೆಗಾರರು ಬೆದರಿದ್ದು ಕೋರೆಯ ಸುತ್ತಮುತ್ತ ಅನುಮಾನಾಸ್ಪದ ರೀತಿಯಲ್ಲಿ ಸುತ್ತುತ್ತಿದ್ದಾಗ ಅದೇ ದಾರಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಸಜೀಪನಡು ನಿವಾಸಿ ಹನೀಫ್ ಸಂಶಯಗೊಂಡು ಅವರಲ್ಲಿ ವಿಚಾರಿಸಿ
ದ್ದರು. ಆದರೂ ಬಾಯಿ ಬಿಡದ ಹಿನ್ನೆಲೆಯಲ್ಲಿ ಬೆದರಿಸಿ ಕೇಳಿದಾಗ ವಿಚಾರ ಬಹಿರಂಗವಾಗಿತ್ತು. ತತ್‌ಕ್ಷಣ ಅವರು ನೀರಿಗೆ ಇಳಿದು ಬಾಲಕನನ್ನು ಮೇಲೆತ್ತಿದ್ದರು. ಬಾಲಕನ ದೇಹದಲ್ಲಿ ಸಂಚಲನ ಇದ್ದ ಕಾರಣ ತತ್‌ಕ್ಷಣ ಆಸ್ಪತ್ರೆಯತ್ತ ಕರೆದೊಯ್ದರೂ ದಾರಿ ಮಧ್ಯೆ ಮೃತಪಟ್ಟ ಹಿನ್ನೆಲೆಯಲ್ಲಿ ಮರಳಿ ಮನೆಗೆ ತಂದರೆನ್ನಲಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಅವರು ಮೃತದೇಹವನ್ನು ಆಸ್ಪತ್ರೆಗೆ ತರಲು ಸೂಚಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತರಲಾಯಿತು. ಬಳಿಕ ಮನೆಮಂದಿಗೆ ಸುದ್ದಿ ತಿಳಿಸಲಾಯಿತು.
Related Articles
Advertisement
ಬಂಟ್ವಾಳ ಕಂದಾಯ ನಿರೀಕ್ಷಕ ಪಿ. ರಾಮ, ಗ್ರಾಮ ಲೆಕ್ಕಾಧಿಕಾರಿ ಎ.ಪಿ. ಭಟ್, ಪಿಡಿಒ ನಳಿನಿ, ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ, ಕಂದಾಯ ಸಿಬಂದಿಗಳಾದ ಸದಾಶಿವ ಕೈಕಂಬ, ಶೀತಲ್, ರಾಜೀವಿ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಜಿ.ಪಂ. ಮಾಜಿ ಸದಸ್ಯ ಎಸ್. ಅಬ್ಟಾಸ್ ಭೇಟಿ ನೀಡಿದರು.ತಹಶೀಲ್ದಾರ್ ಆಸ್ಪತ್ರೆಗೆ ಬಂದು ಮಾಹಿತಿ ಪಡೆದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.