Advertisement

IQ: 2.5 ವರ್ಷದ ಪೋರಿ ಮೆನ್ಸಾದ ಅತ್ಯಂತ ಕಿರಿಯ ಸದಸ್ಯೆ

11:55 PM Dec 02, 2023 | Team Udayavani |

ವಾಷಿಂಗ್ಟನ್‌: ಕೆಲವೊಮ್ಮೆ ಕೆಲವು ಪದಗಳನ್ನು ಜೋಡಿಸಿ ಓದಲು ದೊಡ್ಡವರೇ ತಿಣುಕಾಡುವಾಗ ಅಮೆರಿಕದ 2.5 ವರ್ಷದ ಪೋರಿಯೊಬ್ಬಳು ತಪ್ಪುಗಳೇ ಇಲ್ಲದಂತೆ, ಸ್ಪಷ್ಟವಾಗಿ ಪದಗಳನ್ನು ಉಚ್ಚರಿಸಿ ದಾಖಲೆ ಸೃಷ್ಟಿಸಿದ್ದಾಳೆ.

Advertisement

ಯಾವುದೇ ಅಕ್ಷರಗಳನ್ನು ಒಮ್ಮೆಗೆ ಕೇಳಿ ದರೂ ತಪ್ಪಿಲ್ಲದಂತೆ ಉತ್ಛರಿಸುವ ಈ ಪುಟಾಣಿ, ಅತ್ಯಂತ ಹೆಚ್ಚು ಬುದ್ಧಿಮತ್ತೆ ಹೊಂದಿರುವ ಅಂತಾರಾಷ್ಟ್ರೀಯ ಸಂಘಟನೆ, ಮೆನ್ಸಾದ ಅತ್ಯಂತ ಕಿರಿಯ ಸದಸ್ಯೆ ಎಂದು ಗಿನ್ನೆಸ್‌ ದಾಖಲೆಗೆ ಸೇರ್ಪಡೆಗೊಂಡಿದ್ದಾಳೆ. ಕೆಂಟುಕಿ ನಿವಾಸಿ ಯಾಗಿರುವ ಜೇಸನ್‌ ಹಾಗೂ ಅಮಾಂಡ ಅವರ ಪುತ್ರಿ ಇಸ್ಲಾ 2.5ರ ವಯಸ್ಸಿನಲ್ಲೇ ಅಕ್ಷರಗಳನ್ನು ತಪ್ಪಿಲ್ಲದಂತೆ ಉತ್ಛರಿಸುವುದು ಪೋಷಕರಿಗೆ ಅಚ್ಚರಿ ತಂದಿದೆ. ಬಳಿಕ ಆಕೆಯ ಐಕ್ಯೂ ಪರೀಕ್ಷೆ ನಡೆಸಿದಾಗ ಶೇ.99ರಷ್ಟು ಬುದ್ಧಿಮತ್ತೆ ಇರುವುದು ಸಾಬೀತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next