ಮುಂಬಯಿ: ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೆಗಾ ಟಿ-20 ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಕ್ರೀಡಾ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಎಂ.ಎಸ್.ಧೋನಿ ಅವರ ಚೆನ್ನೈ ತಂಡ ಮಾ. 31 ರಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಯವ ಮೂಲಕ ಈ ಬಾರಿಯ ಐಪಿಎಲ್ ಗೆ ಚಾಲನೆ ಸಿಗಲಿದೆ.
ಇದು ಧೋನಿ ಅವರ ಕೊನೆಯ ಐಪಿಎಲ್ ಎನ್ನುವುದು ಗೊತ್ತೇ ಇದೆ. ಧೋನಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ಆಟವನ್ನು ನೋಡಲು ಅಭಿಮಾನಿಗಳು ಇತ್ತೀಚೆಗೆ ಅಭ್ಯಾಸ ನಡೆಸುವ ವೇಳೆ ಮೈದಾನಕ್ಕೆ ಬಂದು ಕಣ್ತುಂಬಿಕೊಂಡಿದ್ದರು.
ಧೋನಿ ಅವರಿಗೆ 41 ವರ್ಷವಾದರೂ ಅವರಿನ್ನೂ ಫಿಟ್ ಆಗಿದ್ದಾರೆ. ಯಾರಿಗೂ ಕಮ್ಮಿಯಿಲ್ಲ ಎನ್ನುವಂತೆ ಮೈದಾನದಲ್ಲಿ ಬ್ಯಾಟ್ ಬೀಸುತ್ತಾರೆ. ಅವರ ಫಿಟ್ ನೆಸ್ ಬಗ್ಗೆ ಇದೀಗ ಟೀಮ್ ಇಂಡಿಯಾ ಕಪ್ತಾನ, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮಾತನಾಡಿದ್ದಾರೆ.
ಇದನ್ನೂ ಓದಿ: ನೀತಿ ಸಂಹಿತೆ ಹಿನ್ನೆಲೆ: ಸರ್ಕಾರಿ ಬಿಟ್ಟು ಖಾಸಗಿ ಕಾರಿನಲ್ಲಿ ಪ್ರಯಾಣಿಸಿದ ಸಿದ್ದರಾಮಯ್ಯ
Related Articles
ಬುಧವಾರ ಮುಂಬೈ ಇಂಡಿಯನ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿಕಾಗೋಷ್ಟಿ ನಡೆಸಿತ್ತು. ಇದರಲ್ಲಿ ರೋಹಿತ್ ಶರ್ಮಾ ಮತ್ತು ಕೋಚ್ ಮಾರ್ಕ್ ಬೌಚರ್ ಅವರು ಭಾಗವಹಿಸಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಧೋನಿ ಬಗ್ಗೆ ಮಾತನಾಡಿದ್ದಾರೆ.
“ಇದು ಎಂಎಸ್ ಧೋನಿಯ ಕೊನೆಯ ಸೀಸನ್ ಎಂದು ನಾನು ಕಳೆದ 2-3 ವರ್ಷಗಳಿಂದ ಕೇಳುತ್ತಿದ್ದೇನೆ. ಆದರೆ ನನ್ನ ಪ್ರಕಾರ ಅವರು ಇನ್ನು 2-3 ಸೀಸನ್ ಗಳನ್ನು ಆಡುವಷ್ಟು ಫಿಟ್ ಆಗಿದ್ದಾರೆ”. ಎಂದಿದ್ದಾರೆ.
2008 ರಿಂದ ಚೆನ್ನೈ ತಂಡವನ್ನು ಮುನ್ನಡೆಸುತ್ತಿರುವ ಎಂ.ಎಸ್.ಧೋನಿ 234 ಪಂದ್ಯಗಳಲ್ಲಿ 4978 ರನ್ ಗಳಿಸಿ, ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ರೋಹಿತ್ ಶರ್ಮಾ ಮಾತ್ರವಲ್ಲದೆ ಇತ್ತೀಚೆಗೆ ಆಸೀಸ್ ನ ಸ್ಫೋಟಕ ಆಟಗಾರ, ಚೆನ್ನೈ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್ ಕೂಡ ಎಂ.ಎಸ್. ಧೋನಿ ಈಗಲೂ ತುಂಬಾ ಫಿಟ್ ಆಗಿದ್ದಾರೆ ಅವರು ಇನ್ನೂ ಮೂರು – ನಾಲ್ಕು ವರ್ಷ ಆಡಬಹುದು ಎಂದಿದ್ದರು.