Advertisement

ಮುಂಬೈ-ರಾಜಸ್ಥಾನ್‌ ಸಿಹಿ ಯಾರಿಗೆ? ಸೂರ್ಯ ಕುಮಾರ್‌ ಯಾದವ್‌ ಆಗಮನ

12:09 AM Apr 02, 2022 | Team Udayavani |

ನವೀ ಮುಂಬಯಿ: ಮೊದಲ ಪಂದ್ಯವನ್ನು ಸೋಲುವ ಪರಿಪಾಠವನ್ನು ಈ ವರ್ಷವೂ ಮುಂದುವರಿಸಿರುವ 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಶನಿವಾರ ತನ್ನದೇ ನವೀ ಮುಂಬಯಿ ಅಂಗಳದಲ್ಲಿ ಬಲಾಡ್ಯ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೆಣಸಲಿದೆ.

Advertisement

ಗೆಲುವಿನ ಸಿಹಿ ಯಾರಿಗೆ ಎಂಬುದು ಯುಗಾದಿ ದಿನದ ನಿರೀಕ್ಷೆ.ದಿನದ ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌-ಗುಜರಾತ್‌ ಟೈಟಾನ್ಸ್‌ ಸೆಣಸಲಿವೆ.

ಬೌಲ್ಟ್ ಮುಂಬೈ ಎದುರಾಳಿ!
ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿ 177 ರನ್‌ ಪೇರಿಸಿಯೂ ಮುಂಬೈ 4 ವಿಕೆಟ್‌ಗಳಿಂದ ಸೋತಿತ್ತು. ಬ್ಯಾಟಿಂಗ್‌ ಕ್ಲಿಕ್‌ ಆದರೂ ಬೌಲಿಂಗ್‌ ಕೈಕೊಟ್ಟಿತ್ತು. ಕಿವೀಸ್‌ ವೇಗಿ ಟ್ರೆಂಟ್‌ ಬೌಲ್ಟ್ ಈ ಬಾರಿ ಇಲ್ಲದಿರುವುದು ರೋಹಿತ್‌ ಪಡೆಗೆ ಎದುರಾದ ಭಾರೀ ಹೊಡೆತ. ಕಳೆದ ಮೆಗಾ ಹರಾಜಿನಲ್ಲಿ ಬೌಲ್ಟ್ ರಾಜಸ್ಥಾನ್‌ ಪಾಲಾಗಿದ್ದಾರೆ. ಶನಿವಾರ ಮುಂಬೈ ಮೇಲೆ ದಾಳಿಗೆ ಇಳಿಯಲಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್‌ ಮೊದಲ ಸಲ ಬೌಲ್ಟ್ ಭೀತಿಗೆ ಸಿಲುಕಿದೆ.

ಸೂರ್ಯಕುಮಾರ್‌ ದರ್ಶನ
ಗಾಯದಿಂದ ಚೇತರಿಸಿಕೊಂಡ ಸೂರ್ಯಕುಮಾರ್‌ ಯಾದವ್‌ ಮುಂಬೈ ಪಾಳೆಯಕ್ಕೆ ಮರಳಿರುವುದು ಸಂತ
ಸದ ಸಂಗತಿ. ಇದರಿಂದ ತಂಡದ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಬಲ ಲಭಿಸುವುದರಲ್ಲಿ ಅನುಮಾನವಿಲ್ಲ.

ಅನ್ಮೋಲ್‌ಪ್ರೀತ್‌ ಸಿಂಗ್‌, ತಿಲಕ್‌ ವರ್ಮ, ಟಿಮ್‌ ಡೇವಿಡ್‌ ಅವರನ್ನೊಳಗೊಂಡ ಮುಂಬೈ ಮಿಡ್ಲ್ ಆರ್ಡರ್‌ ತೀರಾ ಸಾಮಾನ್ಯ ಎನ್ನುವಂತಿದೆ. ಡೆಲ್ಲಿ ವಿರುದ್ಧ ಇವರೆಲ್ಲ ವೈಫ‌ಲ್ಯ ಅನುಭವಿಸಿದ್ದರು.

Advertisement

ಹಾಗೆಯೇ ಮುಂಬೈ ಮೇಲುಗೈಗೆ ಕೈರನ್‌ ಪೊಲಾರ್ಡ್‌ ಫಾರ್ಮ್ ನಿರ್ಣಾಯಕ. ಡೆಲ್ಲಿ ವಿರುದ್ಧ ಕೆರಿಬಿಯನ್‌ ದೈತ್ಯ ಕೇವಲ 3 ರನ್ನಿಗೆ ಔಟಾಗಿದ್ದರು. ಅಲ್ಲಿ ಇಶಾನ್‌ ಕಿಶನ್‌-ರೋಹಿತ್‌ ಶರ್ಮ ಮಾತ್ರ ಕ್ಲಿಕ್‌ ಆಗಿದ್ದರು. ಇಶಾನ್‌ ಕಿಶನ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಅಜೇಯ 81 ರನ್‌ ಬಾರಿಸಿದ್ದರಿಂದ ಮುಂಬೈ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿತ್ತು.

ಈ ಮೊತ್ತವನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲವೆಂದರೆ ಅದು ಮುಂಬೈ ಬೌಲಿಂಗ್‌ ವೈಫ‌ಲ್ಯವೇ ಹೊರತು ಬೇರೇನಲ್ಲ. ಸ್ಟ್ರೈಕ್‌ ಬೌಲರ್‌ಗಳಾದ ಬುಮ್ರಾ, ಸ್ಯಾಮ್ಸ್‌ ಸಕತ್ತಾಗಿ ಚಚ್ಚಿಸಿ ಕೊಂಡಿದ್ದರು. ಗಮನ ಸೆಳೆದದ್ದು ಥಂಪಿ ಮತ್ತು ಮುರುಗನ್‌ ಅಶ್ವಿ‌ನ್‌ ಮಾತ್ರ.

ರಾಜಸ್ಥಾನ್‌ ಹೆಚ್ಚು ಬಲಿಷ್ಠ
ರಾಜಸ್ಥಾನ್‌ ಬ್ಯಾಟಿಂಗ್‌ ಲೈನ್‌ಅಪ್‌ ಭಾರೀ ಬಲಿಷ್ಠ. ಹೈದರಾಬಾದ್‌ ವಿರುದ್ಧ ಅದು 210 ಪೇರಿಸಿತ್ತು. ಸ್ಯಾಮ್ಸನ್‌, ಬಟ್ಲರ್‌, ಜೈಸ್ವಾಲ್‌, ಪಡಿಕ್ಕಲ್‌, ಹೆಟ್‌ಮೈರ್‌, ಪರಾಗ್‌… ಎಲ್ಲರೂ ಸಿಡಿದು ನಿಂತಿದ್ದರು. ಇವರನ್ನು ನಿಯಂತ್ರಿಸಲು ಮುಂಬೈಯ ಸಾಮಾನ್ಯ ಬೌಲಿಂಗ್‌ ಪಡೆಯಿಂದ ಸಾಧ್ಯವೇ? ಇದು ಪ್ರಶ್ನೆ.

ರಾಜಸ್ಥಾನ್‌ ಬೌಲಿಂಗ್‌ ಕೂಡ ಘಾತಕ. ಟ್ರೆಂಟ್‌ ಬೌಲ್ಟ್ ಜತೆಗೆ ಪ್ರಸಿದ್ಧ್ ಕೃಷ್ಣ, ನಥನ್‌ ಕೋಲ್ಟರ್‌ ನೈಲ್‌, ಸ್ಪಿನ್‌ದ್ವಯರಾದ ಆರ್‌. ಅಶ್ವಿ‌ನ್‌, ಚಹಲ್‌ ಇಲ್ಲಿನ ಹುರಿಯಾಳುಗಳು.

 

Advertisement

Udayavani is now on Telegram. Click here to join our channel and stay updated with the latest news.

Next