Advertisement
ಗುಜರಾತ್ ತಂಡವನ್ನು ಟೀಮ್ ಇಂಡಿಯಾದಿಂದ ಬೇರ್ಪಟ್ಟಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಅವರಿಗೆ ಇದು ಐಪಿಎಲ್ ಕ್ಯಾಪ್ಟನ್ಸಿಯ ಮೊದಲ ಅನುಭವ. ಲಕ್ನೋಗೆ ಸಾರಥಿಯಾಗಿರುವವರು ಕನ್ನಡಿಗ ಕೆ.ಎಲ್. ರಾಹುಲ್. ಈಗಾಗಲೇ ಪಂಜಾಬ್ ಕಿಂಗ್ಸ್ ನಾಯಕತ್ವದ ಅನುಭವ ಹೊಂದಿರುವ ಅವರಿಗೆ ಅಲ್ಲಿ ಅದೃಷ್ಟ ಕೈಹಿಡಿದಿರಲಿಲ್ಲ. ಹೊಸ ತಂಡ ಲಕ್ ತಂದೀತೇ ಎಂಬುದೊಂದು ನಿರೀಕ್ಷೆ.
ಹಾರ್ಡ್ ಹಿಟ್ಟಿಂಗ್ ಆಲ್‌ರೌಂಡರ್ ಎನಿಸಿದರೂ ಬದ್ಧತೆಯ ಕೊರತೆ ಹಾಗೂ ತುಸು ನಿರ್ಲಕ್ಷ್ಯದಿಂದಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ಹಾರ್ದಿಕ್ ಪಾಂಡ್ಯ ನಾಯಕನಾಗಿ ಹೆಚ್ಚು ಜವಾಬ್ದಾರಿ ಯುತವಾಗಿ ವರ್ತಿಸುವುದು ಅನಿವಾರ್ಯ. ಇಲ್ಲಿ ಯಶಸ್ಸು ಕಂಡರಷ್ಟೇ ಅವರಿಗೆ ಭಾರತ ತಂಡದಲ್ಲಿ ಮರಳಿ ಸ್ಥಾನ ಎಂಬುದು ಸದ್ಯದ ಸ್ಥಿತಿ. ಕೆಕೆಆರ್ ತಂಡದಿಂದ ಬಂದ ಶುಭಮನ್ ಗಿಲ್ ಮತ್ತು ಅಫ್ಘಾನಿಸ್ಥಾನದ ರಹಮಾನುಲ್ಲ ಗುರ್ಬಜ್ ಗುಜರಾತ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್, ಸಾಹಾ, ರಾಹುಲ್ ತೇವಟಿಯಾ, ವಿಜಯ್ ಶಂಕರ್, ಅಭಿನವ್ ಮನೋಹರ್, ಲಾಕಿ ಫರ್ಗ್ಯುಸನ್ ಅವರನ್ನು ತಂಡ ನೆಚ್ಚಿಕೊಂಡಿದೆ.
Related Articles
ಗುಜರಾತ್‌ಗೆ ಹೋಲಿಸಿದರೆ ಲಕ್ನೋ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ರಾಹುಲ್, ಕ್ವಿಂಟನ್ ಡಿ ಕಾಕ್, ಎವಿನ್ ಲೆವಿಸ್, ಮನೀಷ್ ಪಾಂಡೆ, ಕೈಲ್ ಮೇಯರ್, ಆ್ಯಂಡ್ರೂé ಟೈ, ಮಾರ್ಕಸ್ ಸ್ಟೋಯಿನಿಸ್, ಆಲ್‌ರೌಂಡರ್‌ಗಳಾದ ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ. ಗೌತಮ್ ಅವರೆಲ್ಲ ತಂಡದ ಪ್ರಮುಖ ಆಟಗಾರರು.
Advertisement
ಲಕ್ನೋ ಬೌಲಿಂಗ್ ವಿಭಾಗ ಘಾತಕವಾಗೇನೂ ಗೋಚರಿಸದಿದ್ದರೂ ವೈವಿಧ್ಯಮಯವಾಗಿದೆ. ಆವೇಶ್ ಖಾನ್, ರವಿ ಬಿಷ್ಣೋಯಿ, ದುಷ್ಮಂತ ಚಮೀರ, ಶಬಾಜ್ ನದೀಂ, ಅಂಕಿತ್ ರಜಪೂತ್ ಬೌಲಿಂಗ್ ಭಾರವನ್ನು ಹೊರಬೇಕಿದೆ.
ತಂಡಗಳುಗುಜರಾತ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಅಭಿನವ್ ಮನೋಹರ್ , ರಹಮಾನುಲ್ಲ ಗುರ್ಬಜ್, ಡೊಮಿನಿಕ್ ಡ್ರಾಕ್ಸ್, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೇವಟಿಯಾ, ರಶೀದ್ ಖಾನ್, ಆರ್. ಸಾಯಿ ಕಿಶೋರ್, ನೂರ್ ಅಹ್ಮದ್, ಕಾಲಂ ಫರ್ಗ್ಯುಸನ್, ಮೊಹಮ್ಮದ್ ಶಮಿ, ದರ್ಶನ್ ನಲ್ಕಂಡೆ, ಯಶ್ ದಯಾಳ್, ಪ್ರದೀಪ್ ಸಂಗ್ವಾನ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಾಹಾ, ಡೇವಿಡ್ ಮಿಲ್ಲರ್, ಗುರುಕೀರತ್ ಸಿಂಗ್, ವರುಣ್ ಆರೋನ್, ಬಿ. ಸಾಯಿ ಸುದರ್ಶನ್, ಅಲ್ಜಾರಿ ಜೋಸೆಫ್. ಲಕ್ನೋ: ಕೆ.ಎಲ್. ರಾಹುಲ್ (ನಾಯಕ), ಮನನ್ ವೋಹ್ರ, ಮನೀಷ್ ಪಾಂಡೆ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋಯಿನಿಸ್, ಕೆ. ಗೌತಮ್, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಆ್ಯಂಡ್ರೂé ಟೈ, ರವಿ ಬಿಷ್ಣೋಯಿ, ದುಷ್ಮಂತ ಚಮೀರ, ಶಾಬಾಜ್ ನದೀಮ್, ಅಂಕಿತ್ ರಜಪೂತ್, ಆವೇಶ್ ಖಾನ್, ಮೊಹ್ಸಿನ್ ಖಾನ್, ಆಯುಷ್ ಬದಾನಿ, ಕೈಲ್ ಮೇಯರ್, ಕರಣ್ ಶರ್ಮ, ಎವಿನ್ ಲೆವಿಸ್, ಮಾಯಾಂಕ್ ಯಾದವ್. ಇಂದಿನ ಪಂದ್ಯ
ಗುಜರಾತ್-ಲಕ್ನೋ
ಸ್ಥಳ: ಮುಂಬಯಿ ಆರಂಭ: 7.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್