Advertisement

ಆರ್ ಸಿಬಿ – ಸನ್ ರೈಸರ್ಸ್ : ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ

07:13 PM Sep 21, 2020 | Suhan S |

ಆಬುಧಾಬಿ : ಐಪಿಎಲ್ ಮೂರನೇ  ಪಂದ್ಯ ಆರ್ ಸಿ ಬಿ – ಸನ್ ರೈಸರ್ಸ್ ಹೈದರಾಬಾದ್  ನಡುವಿನ ಮುಖಾಮುಖಿಯಲ್ಲಿ  ಸನ್ ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು  ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

Advertisement

ರಾಯಲ್‌ ಚಾಲೆಂಜರ್ ಮತ್ತು ಹೈದರಾಬಾದ್‌ ಈ ವರೆಗೆ15 ಪಂದ್ಯಗಳನ್ನು ಆಡಿದೆ. ಅವುಗಳ ಪೈಕಿ 8 ಪಂದ್ಯಗಳನ್ನು ಹೈದರಾಬಾದ್‌ ಗೆದ್ದಿದ್ದರೆ, ಬೆಂಗಳೂರು 6 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯವು ಡ್ರಾ ನಲ್ಲಿ ಅಂತ್ಯವಾಗಿದೆ. ಹೈದರಾಬಾದ್‌ನಲ್ಲಿ ವಾರ್ನರ್‌ ಹೊರತುಪಡಿಸಿ ಜಾನಿ ಬೈಸ್ಟೋವ್‌, ಕೇನ್‌ ವಿಲಿಯಮ್ಸನ್‌ ಪ್ರಿಯಮ್‌ ಗಾರ್ಗ್‌ ಮತ್ತು ಮನೀಶ್‌ ಪಾಂಡೆ ಅವರಂತಹ ಬ್ಯಾಟಿಂಗ್‌ ಬಲವಿದೆ. ಭುವನೇಶ್ವರ್‌ ಕುಮಾರ್‌ ಅವರಲ್ಲದೆ ಖಲೀಲ್‌ ಅಹ್ಮದ್‌ ಮತ್ತು ವಿರಾಟ್‌ ಸಿಂಗ್‌ ಕೂಡ ಬೌಲಿಂಗ್‌ನಲ್ಲಿ ಶಕ್ತಿ ತುಂಬಲಿದ್ದಾರೆ.

ಆರ್‌ಸಿಬಿಯಲ್ಲಿ ವಿರಾಟ್‌ ಕೊಹ್ಲಿಯನ್ನು ಹೊರತುಪಡಿಸಿ ಎಬಿ ಡಿವಿಲಿಯರ್ಸ್‌ ಮತ್ತು ಆರನ್‌ ಫಿಂಚ್‌ ನಂತಹ ಶ್ರೇಷ್ಟ ಬ್ಯಾಟ್ಸ್ಮನ್‌‌ಗಳಿದ್ದಾರೆ. ಆಲೌರೌಂಡರ್‌ಗಳಲ್ಲಿ ಕ್ರಿಸ್‌ ಮೋರಿಸ್‌, ಮೊಯಿನ್‌ ಅಲಿ ಮತ್ತು ವಾಷಿಂಗ್ಟನ್‌ ಸುಂದರ್‌ ಅವರನ್ನು ಹೊಂದಿದೆ. ಬೌಲಿಂಗ್‌ ವಿಭಾಗದಲ್ಲಿ, ಯುಜ್ವೇಂದ್ರ ಚಹಲ್‌ ಹೊರತುಪಡಿಸಿ, ಉಮೇಶ್‌ ಯಾದವ್‌ ಮತ್ತು ನವದೀಪ್‌ ಸೈನಿ ಅವರ ಸೇವೆ ಆರ್‌ಸಿಬಿ ಪಾಲಿಗೆ ಇದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next