ದುಬೈ : ಐಪಿಎಲ್ ಸತತ ಸೋಲುಗಳಿಂದ ಕೆಂಗೆಟ್ಟಿರುವ ಚೆನ್ನೈ ತಂಡ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿ 168 ರ ಸವಾಲನ್ನು ಬಿಟ್ಟು ಕೊಟ್ಟಿದೆ.
ಆರಂಭಿಕ ಜೋಡಿಗಳಾಗಿ ಮೈದಾನಕ್ಕಿಳಿದ ಸ್ಯಾಮ್ ಕರನ್ ಹಾಗೂ ಫಾಫ್ ಡು ಪ್ಲೆಸಿಸ್ ಅಂದುಕೊಂಡ ಮಟ್ಟಿಗೆ ಅಬ್ಬರದ ಆಟ ನೀಡಲು ವಿಫಲರಾದರು. ಖಾತೆ ತೆರೆಯದೆ ಶೂನ್ಯ ಸುತ್ತಿ ಪೆವಿಲಿಯನ್ ಕಡೆ ಸಾಗಿದರು. ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಬ್ಯಾಟ್ ಬೀಸಿದ ಸ್ಯಾಮ್ ಕರ್ರನ್ ಬೌಂಡರಿ ಜೊತೆಗೆ 2 ಆಕರ್ಷಕ ಸಿಕ್ಸರ್ ದಾಖಲಿಸಿ 31 ರನ್ ಗಳಿಸಿ ಸಂದೀಪ್ ಶರ್ಮಾ ಎಸೆತಕ್ಕೆ ಬೌಲ್ಡ್ ಔಟ್ ಆದರು.
ಪ್ರಾರಂಭದಲ್ಲೇ ವಿಕೆಟ್ ಕಳೆದುಕೊಂಡ ಚೆನ್ನೈ ತಂಡವನ್ನು ವ್ಯಾಟ್ಸನ್ ಹಾಗೂ ರಾಯುಡು ಜೋಡಿ ಚೇತರಿಕೆಯ ಆಟ ನೀಡಿ ಸ್ಕೋರ್ ಮುಂದುವರಿಕೆಗೆ ನೆರವಾದರು.ವ್ಯಾಟ್ಸನ್ 42 ರನ್ ಗಳಿಸಿ ನಟರಾಜನ್ ಎಸೆತಕ್ಕೆ ಮನೀಶ್ ಪಾಂಡೆ ಕೈಗೆ ಕ್ಯಾಚ್ ಕೊಟ್ಟು ಔಟಾದರೆ, ರಾಯುಡ್ 41 ರನ್ ಗಳಿಸಿ ಖಲೀಲ್ ಎಸೆತಕ್ಕೆ ವಾರ್ನರ್ ಕೈಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ನಾಯಕ ಧೋನಿ ಹಾಗೂ ಜಡೇಜಾ ಅಂತಿಮ ಓವರ್ ನಲ್ಲಿ ಬಿರುಸಿನಿಂದ ಬ್ಯಾಟ್ ಬೀಸಿ ಸ್ಕೋರ್ ಬೋರ್ಡ್ ಮುನ್ನಡೆಗೆ ನೆರವಾದರು.
ಚೆನ್ನೈ ನಿಗದಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿ 168 ರ ಗುರಿಯನ್ನು ವಾರ್ನರ್ ಪಡೆಗೆ ನೀಡಿದೆ.
ಹೈದರಾಬಾದ್ ಪರ ಸಂದೀಪ್ 2 ಪ್ರಮುಖ ವಿಕೆಟ್ ಗಳನ್ನು ಪಡೆದು ಮಿಂಚಿದರು. ನಟರಾಜನ್ ಹಾಗೂ ಖಲೀಲ್ ತಲಾ 1 ವಿಕೆಟ್ ಪಡೆದರು.