ಶಾರ್ಜಾ : ಐಪಿಎಲ್ ರಾಜಸ್ಥಾನ್ – ಡೆಲ್ಲಿ ನಡುವಿನ ಮುಖಾಮುಖಿಯಲ್ಲಿ ಟಾಸ್ ಸೋತು ಬ್ಯಾಟಿಂಗ್ ಸವಾಲಿಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಕಲೆ ಹಾಕಿ 185 ರ ಟಾರ್ಗೆಟ್ ನೀಡಿದೆ.
ಪ್ರಾರಂಭಿಕ ಜೋಡಿಗಳಾಗಿ ಕ್ರಿಸ್ ಗೆ ಇಳಿದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಹೆಚ್ಚು ಹೊತ್ತು ನಿಲ್ಲದೆ ಪೆವಿಲಿಯನ್ ಕಡೆ ಸಾಗಿದರು. ಪೃಥ್ವಿ ಶಾ 19 ರನ್ ಗಳಿಸಿ ಆರ್ಚರ್ ಎಸೆತಕ್ಕೆ ಔಟ್ ಆದ್ರೆ ಧವನ್ 5 ರನ್ ಮಾಡಿ ಆರ್ಚರ್ ಎಸೆತಕ್ಕೆ ಜೈಸ್ವಾಲ್ ಕೈಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಆರಂಭ ನೀಡಿ 22 ರನ್ ಗಳಿಸಿ ರನ್ ಔಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ರಿಷಭ್ ಪಂತ್ ಬರೀ 5 ರನ್ ಗಳಿಸಿ ರನ್ ಔಟ್ ಆದರು.
ಬಳಿಕ ಕ್ರಿಸ್ ಗೆ ಇಳಿದ ಮಾರ್ಕಸ್ ಸ್ಟೊಯಿನಿಸ್ ಹಾಗೂ ಶಿಮ್ರಾನ್ ಹೆಟ್ಮಿಯರ್ ಒತ್ತಡಕ್ಕೆ ಸಿಲುಕಿದ ತಂಡಕ್ಕೆ ಚೇತರಿಕೆ ಆಟ ನೀಡಿ ಸ್ಕೋರ್ ಮುಂದುವರಿಕೆಗೆ ನೆರವಾದರು. ಸ್ಟೊಯಿನಿಸ್ ಭರ್ಜರಿ 4 ಸಿಕ್ಸರ್ ಬಾರಿಸಿ 39 ರನ್ ಗಳಿಸಿ ರಾಹುಲ್ ತೇವಟಿಯಾ ಎಸೆತಕ್ಕೆ ಸ್ಮಿತ್ ಅವರ ಕೈಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಕಡೆ ದಾಪುಗಾಲಿಟ್ಟರು. ಹೆಟ್ಮಿಯರ್ ಬಿರುಸಿನ ಆಟದಿಂದ 5 ಸಿಕ್ಸರ್ ಹಾಗೂ 1 ಬೌಂಡಿರಿಯೊಂದಿಗೆ 45 ರನ್ ಗಳಿಸಿ ತ್ಯಾಗಿ ಎಸೆತಕ್ಕೆ ತೇವಟಿಯಾ ಕೈಗೆ ಕ್ಯಾಚ್ ಕೊಟ್ಟು ಔಟ್ ಆದರು. ಅಂತಿಮ ಓವರ್ ಲ್ಲಿ ಹರ್ಷಲ್ ಪಟೇಲ್ ಹಾಗೂ ಅಕ್ಸರ್ ಬಿರುಸಿನಿಂದ ಬ್ಯಾಟ್ ಬೀಸಿದರು.
ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದ ಡೆಲ್ಲಿ ತಂಡ ಅಂತಿಮವಾಗಿ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ 185 ರ ಸವಾಲನ್ನು ನೀಡಿದೆ.
ರಾಜಸ್ಥಾನ್ ಉತ್ತಮ ಬೌಲಿಂಗ್ ಮಾಡಿದ ಆರ್ಚರ್ ಎರಡು ಪ್ರಮುಖ ವಿಕೆಟ್ ಗಳನ್ನು ಪಡೆದುಕೊಂಡರು.