Advertisement

ಆರ್ ಸಿಬಿ – ಕೆಕೆಆರ್ ಮುಖಾಮುಖಿ : ಟಾಸ್ ಗೆದ್ದ ಆರ್ ಸಿಬಿ ಬ್ಯಾಟಿಂಗ್ ಆಯ್ಕೆ

07:07 PM Oct 12, 2020 | Suhan S |

ಶಾರ್ಜಾ : ಐಪಿಎಲ್ ನ 28 ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಟಾಸ್ ಗೆದ್ದ ಆರ್ ಸಿಬಿ ಬ್ಯಾಟಿಂಗ್ ಆಯ್ದುಕೊಂಡಿದೆ.

Advertisement

ದಿನೇಶ್ ಕಾರ್ತಿಕ್ ನಾಯಕತ್ವದ ಕೆಕೆಆರ್ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು ಅದರಲ್ಲಿ 2 ಪಂದ್ಯದಲ್ಲಿ ಸೋಲ್ಪೊಪ್ಪಿಕೊಂಡು, ಇನ್ನುಳಿದ 4 ಪಂದ್ಯದಲ್ಲಿ ಜಯಗಳಿಸಿ ಅಂಕ ಪಟ್ಟಿಯಲ್ಲಿ ಸದ್ಯ 3 ನೇ ಸ್ಥಾನದೊಂದಿಗೆ ಬಲಿಷ್ಠವಾಗಿದೆ. ಕೆಕೆಆರ್ ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 2 ರನ್ ಅಂತರದಿಂದ ಜಯಗಳಿಸಿತ್ತು.

ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡ ಈ ಬಾರಿಯ ಆವೃತ್ತಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದ್ದು ಇದುವರೆಗೆ ಆಡಿದ 6 ಪಂದ್ಯದಲ್ಲಿ 4 ರಲ್ಲಿ ಗೆದ್ದು 2 ರಲ್ಲಿ ಮುಗ್ಗರಿಸಿ ಸದ್ಯ ಅಂಕ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ. ಆರ್ ಸಿಬಿ ತಂಡ ಕಳೆದ ಪಂದ್ಯದಲ್ಲಿ ಚೆನ್ನೈಯನ್ನು ಸೋಲಿಸಿದ ಹುಮ್ಮಸ್ಸಿನಲ್ಲಿದೆ.

ಎರಡು ತಂಡಗಳು ಹಿಂದಿನ ಪಂದ್ಯದಲ್ಲಿ ಗೆದ್ದ ಉತ್ಸಾಹದಲ್ಲಿದ್ದು. ಇಂದಿನ ಪಂದ್ಯ ರೋಚಕತೆಯಿಂದ ಸಾಗುವ ನಿರೀಕ್ಷೆಯಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಇಲೆವೆನ್ ಪ್ಲೇಯಿಂಗ್): ದೇವದತ್ ಪಡಿಕ್ಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ಕೀಪರ್), ವಾಷಿಂಗ್ಟನ್ ಸುಂದರ್, ಶಿವಮ್ ದುಬೆ, ಕ್ರಿಸ್ ಮೋರಿಸ್, ಇಸುರು ಉದಾನಾ, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.

Advertisement

ಕೋಲ್ಕತಾ ನೈಟ್ ರೈಡರ್ಸ್ (ಇಲೆವೆನ್ ಪ್ಲೇಯಿಂಗ್): ರಾಹುಲ್ ತ್ರಿಪಾಠಿ, ಶುಭ್ ಮನ್ ಗಿಲ್, ನಿತೀಶ್ ರಾಣಾ, ಇಯೊನ್ ಮೋರ್ಗಾನ್, ದಿನೇಶ್ ಕಾರ್ತಿಕ್ (ನಾಯಕ / ಕೀಪರ್), ಟಾಮ್ ಬಾಂಟನ್, ಅಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ಪ್ರಸಾದ್ ಕೃಷ್ಣ, ವರುಣ್ ಚಕ್ರವರ್ತಿ.

Advertisement

Udayavani is now on Telegram. Click here to join our channel and stay updated with the latest news.

Next