Advertisement

IPL: ಮೊದಲೆರಡು ಪಂದ್ಯಗಳಿಗೆ ವೇಡ್‌ ಇಲ್ಲ

12:38 AM Mar 09, 2024 | Team Udayavani |

ಹೊಸದಿಲ್ಲಿ: ಗುಜರಾತ್‌ ಟೈಟಾನ್ಸ್‌ನ ಆಸ್ಟ್ರೇಲಿಯನ್‌ ಕ್ರಿಕೆಟಿಗ ಮ್ಯಾಥ್ಯೂ ವೇಡ್‌ ಮೊದಲೆರಡು ಐಪಿಎಲ್‌ ಪಂದ್ಯಗಳಿಗೆ ಲಭ್ಯರಿರು ವುದಿಲ್ಲ. ಮಾ. 21ರಿಂದ 25ರ ತನಕ ನಡೆಯುವ “ಶೆಫೀಲ್ಡ್‌ ಶೀಲ್ಡ್‌’ ಕ್ರಿಕೆಟ್‌ ಫೈನಲ್‌ನಲ್ಲಿ ಆಡುವುದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ. ಎಡಗೈ ಬ್ಯಾಟರ್‌ ಹಾಗೂ ಕೀಪರ್‌ ಆಗಿರುವ ವೇಡ್‌ ಇಲ್ಲಿ ಟಾಸ್ಮೇನಿಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

ಕಳೆದ ವರ್ಷದ ಫೈನಲಿಸ್ಟ್‌ ಗುಜರಾತ್‌ ಟೈಟಾನ್ಸ್‌ ತನ್ನ ಮೊದಲ ಪಂದ್ಯವನ್ನು ಮಾ. 25ರಂದು ಮುಂಬೈ ಇಂಡಿಯನ್ಸ್‌ ವಿರುದ್ಧ, ದ್ವಿತೀಯ ಪಂದ್ಯವನ್ನು ಮಾ. 27ರಂದು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡಲಿದೆ. ಮಾ. 31ರಂದು ಸನ್‌ರೈಸರ್ ಹೈದರಾಬಾದ್‌ ವಿರುದ್ಧ ನಡೆಯುವ ಪಂದ್ಯಕ್ಕೆ ವೇಡ್‌ ಲಭ್ಯರಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next