Advertisement

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

12:28 AM Apr 23, 2024 | Team Udayavani |

ಹೊಸದಿಲ್ಲಿ: ಸ್ನಾಯು ಸೆಳೆತಕ್ಕೆ ಸಿಲುಕಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಚಿಕಿತ್ಸೆಯ ಸಲುವಾಗಿ ಮಾರ್ಷ್‌ ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದರು. ಇದೀಗ ಹೊತ್ತಿಗೆ ಸರಿಯಾಗಿ ಚೇತರಿಸಿ ಕೊಳ್ಳದ ಕಾರಣ ಐಪಿಎಲ್‌ನಿಂದ ಬೇರ್ಪಡುವುದು ಅನಿವಾರ್ಯವಾಗಿದೆ.

Advertisement

ಮಾರ್ಷ್‌ ಬದಲು ಆಸೀಸ್‌ ವೇಗಿ ಜೋಶ್‌ ಹೇಝಲ್‌ವುಡ್‌ ಅವರನ್ನು ಡೆಲ್ಲಿ ಫ್ರಾಂಚೈಸಿ ಖರೀದಿಸುವ ಸಾಧ್ಯತೆ ಇದೆ. ಆ್ಯನ್ರಿಚ್‌ ನೋರ್ಜೆ ಅವರ ಕಳಪೆ ಫಾರ್ಮ್ ಕೂಡ ಇದಕ್ಕೆ ಕಾರಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next