Advertisement

ಐಪಿಎಲ್‌: ಡೆಲ್ಲಿ ಕ್ಯಾಪಿಟಲ್ಸ್‌ ಗೆ ಆರಂಭಿಕರದ್ದೇ ಸಮಸ್ಯೆ

11:06 PM May 07, 2022 | Team Udayavani |

ನವಿ ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ರವಿವಾರದ ಎರಡನೇ ಐಪಿಎಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಪ್ಲೇ ಆಫ್ ಗೆ ತೇರ್ಗಡೆಯಾಗಬೇಕಾದರೆ ಡೆಲ್ಲಿ ತಂಡವು ಶೀಘ್ರವಾಗಿ ಆರಂಭಿಕ ಆಟಗಾರರ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಮತ್ತು ಡೇವಿಡ್‌ ವಾರ್ನರ್‌ ಅವರಿಗೆ ಸೂಕ್ತವಾದ ಜತೆಗಾರನೊಬ್ಬರನ್ನು ಹುಡುಕಬೇಕಾಗಿದೆ.

Advertisement

ಡೆಲ್ಲಿ ತಂಡವು ಸದ್ಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ 21 ರನ್ನುಗಳ ಜಯ ಸಾಧಿಸಿದ ಡೆಲ್ಲಿ ತಂಡವು ಆದೇ ಉತ್ಸಾಹದಲ್ಲಿ ಚೆನ್ನೈ ಸವಾಲನ್ನು ಎದುರಿಸಲು ಸಜ್ಜಾಗಿದೆ.

ಹಾಲಿ ಚಾಂಪಿಯನ್‌ ಆಗಿರುವ ಚೆನ್ನೈ ತಂಡ ಈ ಐಪಿಎಲ್‌ನಲ್ಲಿ ನೀರಸ ಆರಂಭ ಪಡೆದಿದೆ. ನಾಯಕತ್ವ ಬದಲಾವಣೆಯ ಗೊಂದಲದ ನಡುವೆ ಚೆನ್ನೈ ಇನ್ನುಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸುವತ್ತ ಗಮನ ಹರಿಸಿದೆ. ಲೆಕ್ಕಾಚಾರದಂತೆ ಪ್ಲೇ ಆಫ್ಗೆ ತೇರ್ಗಡೆಯಾಗುವ ಆಸೆ ಇಟ್ಟುಕೊಂಡಿರುವ ಚೆನ್ನೈ ಇನ್ನುಳಿದ ಎಲ್ಲ ಪಂದ್ಯಗಳಲ್ಲಿ ಭಾರೀ ಅಂತರದ ಗೆಲುವಿಗಾಗಿ ಹಾತೊರೆಯುತ್ತಿದೆ. ಧೋನಿ ನಾಯಕತ್ವದ ಚೆನ್ನೈ ತಂಡವು ಸದ್ಯ ಆರಂಕದೊಂದಿಗೆ 9ನೇ ಸ್ಥಾನದಲ್ಲಿದೆ.

ಆರಂಭಿಕರ ಚಿಂತೆ
ಈ ಐಪಿಎಲ್‌ನಲ್ಲಿ 10 ಪಂದ್ಯಗಳ ನ್ನಾಡಿದರೂ ಡೆಲ್ಲಿ ತಂಡವು ವಾರ್ನರ್‌ಗೆ ಸಮರ್ಥ ಜತೆಗಾರನೊಬ್ಬನನ್ನು ನೀಡಲು ವಿಫ‌ಲವಾಗಿದೆ. ಪೃಥ್ವಿ ಶಾ ತನ್ನ ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲಿ ಬ್ಯಾಟಿಂಗ್‌ ಪ್ರದರ್ಶಿಸಲು ಅಸಮರ್ಥ ರಾಗಿದ್ದಾರೆ. 9 ಪಂದ್ಯಗಳಿಂದ ಅವರು 28.77 ಸರಾಸರಿಯಲ್ಲಿ 259 ರನ್‌ ಗಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅವರ ಬದಲಿಗೆ ಮನ್‌ದೀಪ್‌ ಸಿಂಗ್‌ ಅವರನ್ನು ಇನ್ನಿಂಗ್ಸ್‌ ಆರಂಭಿಸಲು ಆಯ್ಕೆ ಮಾಡಲಾಗಿತ್ತು. ಆದರೆ ಅವರು ಕೂಡ ನಿರಾಶೆಗೊಳಿಸಿದರು.

ರವಿವಾರದ ಪಂದ್ಯದಲ್ಲಿ ಪೃಥ್ವಿ ಶಾ ಮತ್ತೆ ವಾರ್ನರ್‌ ಜತೆ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ. ಈ ಋತುವಿನಲ್ಲಿ ವಾರ್ನರ್‌ ಡೆಲ್ಲಿ ತಂಡದ ಗರಿಷ್ಠ ಸ್ಕೋರರ್‌ ಆಗಿದ್ದಾರೆ. 8 ಪಂದ್ಯಗಳಿಂದ ಅವರು 356 ರನ್‌ ಪೇರಿಸಿದ್ದಾರೆ.

Advertisement

ಗಾಯ, ಕಳಪೆ ಫಾರ್ಮ್
ಗಾಯದ ಸಮಸ್ಯೆ ಮತ್ತು ಆಟಗಾರರ ಕಳಪೆ ಫಾರ್ಮ್ನಿಂದ ಚೆನ್ನೈತಂಡಕ್ಕೆ ಬಹಳಷ್ಟು ಹೊಡೆತ ಬಿದ್ದಿದೆ. ಗಾಯದ ಸಮಸ್ಯೆಯಿಂದಾಗಿ ದೀಪಕ್‌ ಚಹರ್‌ ಮತ್ತು ಆ್ಯಡಂ ಮಿಲೆ° ಅವರನ್ನು ಪೂರ್ಣ ಋತುವಿಗೆ ಕಳೆದುಕೊಂಡರೆ ರುತುರಾಜ್‌ ಗಾಯಕ್ವಾಡ್‌, ಆಲ್‌ರೌಂಡರ್‌ ರವೀಂದ್ರ ಜಡೇಜ ಅವರ ಕಳಪೆ ಫಾರ್ಮ್ ತಂಡಕ್ಕೆ ಚಿಂತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next