ಹೊಸದಿಲ್ಲಿ : 11ನೇ ಐಪಿಎಲ್ ಆವೃತ್ತಿ ಆರಂಭವಾಗುವುದಕ್ಕೆ ಮುನ್ನವೇ ಚೆಂಡು ವಿರೂಪ ಕಳಂಕಿತ ಆಸೀಸ್ ಕ್ರಿಕೆಟ್ ತಂಡದ ಕಪ್ತಾನ ಸ್ಟೀವ್ ಸ್ಮಿತ್ ಅವರು ತಮ್ಮ ರಾಜಸ್ಥಾನ್ ರಾಯಲ್ಸ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಹಾಗಾಗಿ ಈಗಿನ್ನು ಭಾರತೀಯ ಕ್ರಿಕೆಟಿಗ ಅಜಿಂಕ್ಯ ರಹಾಣೆ ಅವರು ರಾಜಸ್ಥಾನ್ ರಾಯಲ್ಸ್ ನಾಯಕತ್ವದ ಹೊಣೆಗಾರಿಕೆ ವಹಿಸಲಿದ್ದಾರೆ.
ದಕ್ಷಿಣ ಆಫ್ರಿಕ ಎದುರಿನ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸುವ ಕೃತ್ಯದಲ್ಲಿ ತಂಡದ ನಾಯಕತ್ವ ಸಮೂಹದೊಂದಿಗೆ ಶಾಮೀಲಾಗಿದ್ದಕ್ಕೆ ಸ್ಟೀವ್ ಸ್ಮಿತ್‌ಗೆ ಐಸಿಸಿ ನಿನ್ನೆ ಭಾನುವಾರ ಆಸೀಸ್ ಕಪ್ತಾನ ಸ್ಮಿತ್‌ಗೆ ಒಂದು ಟೆಸ್ಟ್ ನಿಷೇಧ ಮತ್ತು ಶೇ.100 ಮ್ಯಾಚ್ ಫೀ ದಂಡ ವಿಧಿಸಿತ್ತು.
ಅದೇ ವೇಳೆ ಆಸೀಸ್ ತಂಡದ ಎಸೆಗಾರ ಕ್ಯಾಮೆರಾನ್ ಬ್ಯಾಂಕ್ರಾಫ್ಟ್ ಅವರಿಗೆ ಶೇ.75 ಮ್ಯಾಚ್ ಫೀ ದಂಡ ಹಾಗೂ 3 ಡೀಮೆರಿಟ್ ಪಾಯಿಂಟ್‌ಗಳನ್ನು ಶಿಕ್ಷೆಯ ರೂಪದಲ್ಲಿ ವಿಧಿಸಿತ್ತು. ಬ್ಯಾಂಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸುವ ಕೃತ್ಯವು ಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು.