Advertisement

ಮುಂಬಯಿಯಲ್ಲಿ ಐಪಿಎಲ್‌ ಆರಂಭ?

11:11 PM Dec 30, 2019 | Sriram |

ಮುಂಬಯಿ: ಮುಂಬರುವ ಐಪಿಎಲ್‌ ಟಿ20 ಕ್ರಿಕೆಟ್‌ ಕೂಟ ಮಾ. 29ರಿಂದ ಮುಂಬಯಿಯಲ್ಲಿ ಆರಂಭವಾಗಲಿದೆ ಎನ್ನಲಾಗಿದೆ.

Advertisement

ಐಪಿಎಲ್‌ ಆಡಳಿತ ಮಂಡಳಿ ಅಧಿಕೃತ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲವಾದರೂ ಕೂಟದಲ್ಲಿ ಭಾಗವಹಿಸಿರುವ ತಂಡದ ಫ್ರಾಂಚೈಸಿ ಮಾಲಕರೊಬ್ಬರು ಈ ವಿಷಯ ತಿಳಿಸಿದ್ದಾರೆ.

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ ಎಂದೂ ಅವರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಕೂಟದ ಮೊದಲ ಕೆಲವು ಪಂದ್ಯಗಳಿಗೆ ಆಸ್ಟ್ರೇಲಿಯ, ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌ ಮತ್ತು ಶ್ರೀಲಂಕಾ ಕ್ರಿಕೆಟಿಗರು ಲಭ್ಯವಾಗುವುದಿಲ್ಲ. ಆಗ ಈ ನಾಲ್ಕೂ ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ ಸರಣಿಯಲ್ಲಿ ಬ್ಯುಸಿ ಆಗಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next